ಇತ್ತೀಚಿಗೆ ನನ್ನ ಮನಸ್ಸು ಬಹಳ ಬೇಜಾರವಾಗಿದೆ, ಏನೋ ಗೋತ್ತಿಲ್ಲ ಕೆಲಸ ಮಾಡಲು ಮನಸ್ಸು ಬುರುತ್ತಿಲ್ಲ, ನಿದ್ದೆ ಮತ್ತು ಹಸಿವು ಆಗುತ್ತಿಲ್ಲ, ಜೀವನದಲ್ಲಿ ಒಂದಲ್ಲ ಒಂದು ಸಮಸ್ಯೆಗಳು ಬರುತ್ತಲೆ ಇವೆ, ನೆಮ್ಮದಿ ಎನ್ನುವುದು ಆ ದೇವರು ನನ್ನ ಹಣೆಬರದಲ್ಲಿ ಬರಿದ್ದಾನೋ ಇಲ್ಲೋ ಗೋತ್ತಿಲ್ಲ, ಜೀವನ ಸಾಕಾಗಿ ಬಿಟ್ಟಿದೆ. ನನ್ನ ಸಮಸ್ಯೆಗಳನ್ನು ಕೇಳುವವರು ಯಾರೂ ಇಲ್ಲಾ, ಬೆಳಿಗ್ಗೆಯಿಂದ ಮಲಗುವರಿಗೂ ಕೆಲಸ ತಪ್ಪಿದ್ದಲ್ಲ, ನಮ್ಮದು ಜೀವನ ಅಲ್ಲವೇ ಈ ನರಕದ ಜೀವನ ಬೇಡ, ನಾನು ಬದುಕುವುದು ಯಾರ ಸಲುವಾಗಿ, ನನ್ನವರು ನನಗೆ ಆಸರವಾಗದೆ ಇರುವಾಗ ನಾನು ಬದುಕಿ ಪ್ರಯೋಜನ ಏನು, ಸುಮ್ಮನೆ ಸತ್ತು ಹೋಗುವುದು ಒಳ್ಳಯದು, ಇದಕ್ಕೆ ಯಾವುದು ಪರಿಹಾರನು ಇಲ್ಲಾ ಚಿಕಿತ್ಸೆಯನು ಇಲ್ಲ, ಹಿಗಾದರೆ ನನ್ನ ಸಮಸ್ಯಗಳಿಗೆ ನಾನೂ ಹೇಗೆ ಪರಿಹರಿಸಿಕೊಳ್ಳಬೇಕು. ಬೇಡ ನನ್ನ ಜೀವನಕ್ಕೆ ಅಂತ್ಯ ಆತ್ಮಹತ್ಯೆನೇ ಪರಿಹಾರ ಎಂಬ ಹೀಗೆ ಹಲವಾರು ವಿಚಾರಗಳು ಸುಮಾರು ದಿವಸದವರಿಗೆ ಮನಸ್ಸಿನಲ್ಲಿ ಹುದಗಿಕೊಂಡಿದ್ದು, ಈ ರೀತಿಯಾಗಿ ಯೋಚಿಸುತ್ತಾ ಇರುವ ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.
ಈ ರೀತಿ ಸಮಸ್ಯೆಗಳಿರುವ ವ್ಯಕ್ತಿಗಳಲ್ಲಿ ವಿನಂತಿಸುವುದೇನಂದರೆ? ಆತ್ಮಹತ್ಯೆ ಎನ್ನುವುದು ಪರಿಹಾರ ಅಲ್ಲ ಇದಕ್ಕೂ ಕೂಡ ವಿಶೇಷ ತಜ್ಞರ ಮನೋವೈದ್ಯರ, ಚಿಕತ್ಸೆ ಇದೆ. ಸಾರ್ವಜನಿಕರಿಗೆ, ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಮತ್ತು ಅವರ ಸಂಬಂಧಿಕರಿಗೆ ಮಾನಸಿಕ ಕಾಯಿಲೆಯ ಬಗ್ಗೆ ಜಾಗೃತಿ, ಅರಿವು ಮತ್ತು ತಿಳುವಳಿಕೆಯನ್ನು ಮೂಡಿಸುವ ಸಲುವಾಗಿ ಆತ್ಮಹತ್ಯೆ ತಡೆಗಟ್ಟಲು ವಿಶ್ವ ಆರೋಗ್ಯ ಸಂಸ್ಥೆಯು, ಪ್ರತಿ ವರ್ಷ ಸೆಪ್ಟಂಬರ್ ೧೦ ರಂದು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನವನ್ನು ೨೦೦೩ ರಲ್ಲಿ ಪ್ರಾರಂಬಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಆತ್ಮಹತ್ಯೆ ನಿಯಂತ್ರಿಸುವದರ ಬಗ್ಗೆ ಜನರಲ್ಲಿ ಅರಿವನ್ನು ಉಂಟು ಮಾಡುವ ಕಾರ್ಯಕ್ರಮವನ್ನು ಕೈಗೊಳ್ಳುತ್ತಲಿದೆ.ಆತ್ಮಹತ್ಯೆ ಮಾಡಿಕೊಳ್ಳುವುದು ಮಾಹಾ ಪಾಪ ಎಂದು ಹಲವು ಧರ್ಮಗಳ ಬೋಧನೆ ಇದೆ. ಹಿರಿಯರು ಜಾಣ್ಣುಡಿಗಳು ಮತ್ತು ಗಾದೆ ಮಾತಿನ ಮೂಲಕ ಇದನ್ನು ತಿಳಿಸಿರುತ್ತಾರೆ. ಆದರೆ ಈಗಿನ ಡಿಜಿಟಲ್ ತಂತ್ರಜ್ಞಾನದ ಯುಗದಲ್ಲಿ ಒತ್ತಡಪೂರಿತ ಜೀವನ ಶೈಲಿಯಿಂದ ಬಹುಬೇಗನೆ ಜನರು ಖಿನ್ನತೆಗೆ ಒಳಗಾಗುತ್ತಾರೆ. ಇದರಿಂದ ಹೊರಬರಲು ಅಸಾದ್ಯವೆಂದು ತಿಳಿದು ತಮ್ಮ ಜೀವನವನ್ನು ಅಂತ್ಯಗೊಳಿಸಿಕೊಳ್ಳುತ್ತಾರೆ.
ಆತ್ಮಹತ್ಯೆಯ ವಿಚಾರಗಳು ಅನಿಯಂತ್ರಿತ ಕೋಪ, ಸಿಟುಕುತನ, ಹತಾಶೆ, ದ್ವೇಷ ಕಾರುವುದು, ದೂಮಪಾನ ಮತ್ತು ಮದ್ಯಪಾನ, ಒಂಟಿಯಾಗಿ ಕುಳಿತುಕೊಳ್ಳವುದು, ನಿದ್ರಾಹೀನತೆ, ಮತ್ತು ಚಂಚಲತೆ ಇವರಲ್ಲಿ ಕಾಣಿಸಿಕೊಳ್ಳುತ್ತವೆ ಇತರೆ. ದೇಶದಲ್ಲಿ ಆತ್ಮಹತ್ಯೆಗೆ ಸರಾಸರಿ ೧೫-೩೦ ವಯಸ್ಸು ಹಾಗೂ ೪೫-೬೪ ವಯಸ್ಸಿನವರೇ ಹೆಚ್ಚು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆತ್ಮಹತ್ಯೆ ಪ್ರಕರಣಗಳ ವರದಿ ಪ್ರಕಾರ ಒಟ್ಟು ೫ ರಾಜ್ಯಗಳಲ್ಲಿ ಶೇ ೪೯.೫ ಆತ್ಯಹತ್ಯೆ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಕರ್ನಾಟಕ ರಾಜ್ಯವೂ ಒಂದು. ವiಹಾರಾಷ್ಟç (ಶೇ. ೧೩.೬) ತಮಿಳುನಾಡು (ಶೇ. ೯.೭), ಪಶ್ಚಿಮ ಬಂಗಾಳ (ಶೇ.೯.೧) ಮಧ್ಯಪ್ರದೇಶ(ಶೇ. ೯) ಕರ್ನಾಟಕ (ಶೇ. ೮.೧) (ಇದು ೨೦೧೭ ರಿಂದ ೨೦೧೯ ರವರೆಗಿನ ದೇಶದಲ್ಲಿ ವರದಿಯಾದ ಒಟ್ಟು ಆತ್ಮಹತ್ಯೆಗಳ ಅಂಕಿಅಂಶ) ಹೆಚ್ಚಾಗಿ ರೈತರು ತಮ್ಮ ಸಾಲದ ಭಾರದಿಂದ ಆತ್ಮಹತ್ಯೆಗೆ ಶರಣಾಗುತ್ತಾರೆ, ಕೌಟುಂಬಿಕ ಕಲಹದಿಂದ ಮತ್ತು ವಿದ್ಯಾರ್ಥಿಗಳು ಪರೀಕ್ಷೆಯ ಪಲಿತಾಂಶದಿಂದ ಹೀಗೆ ಹಲವಾರು ಸಣ್ಣ ಪುಟ್ಟ ಕಾರಣಗಳಿಂದ ತಮ್ಮ ಜೀವನವನ್ನು ಕಳೆದುಕೊಳ್ಳುತ್ತಾರೆ. ಉದಾ: ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡ ನಂತರ ಅವರ ಅವಲಂಬಿತ ಕುಟುಂಬ ಇನ್ನೂ ದುಸ್ಥಿತಿಯಲ್ಲಿ ಮುಳುಗುತ್ತದೆ. ಅವನ ಸಾಲದ ಹೊರೆ ಒಂದುಕಡೆಯಾದರೆ ಅವನ ಕುಟುಂಬದ ಸಮಸ್ಯಗಳು ಇನ್ನೊಂದೆಡೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಪಲಿತಾಂಶವೇ ಜೀವನಲ್ಲ, ಪಲಿತಾಂಶ ನಿಮ್ಮ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡುವುದು ಅಷ್ಟೇ, ಕೌಶಲ್ಯಾಧಾರಿತ ಬದುಕು ಬಹಳ ಮುಖ್ಯ. ವಿಶೇಷ ಮಾನಸಿಕ ತಜ್ಞರಿಂದ ಮಾನಸಿಕ ಕಾಯಿಲೆ ಬಗ್ಗೆ ಜನರಿಗೆ ಆತ್ಯಹತ್ಯೆ ತಡೆಗಟ್ಟುವ ಕುರಿತು ಮುಂಜಾಗೃತೆ ಅರಿವು ಮತ್ತು ಇದರ ಬಗ್ಗೆ ಇರುವತಂಹ ಕಳಂಕವನ್ನು ಕಡಿಮೆ ಮಾಡುವ ಉತ್ತಮ ತಿಳುವಳಿಕೆ ನೀಡುವುದರ ಮೂಲಕ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನವನ್ನಾಚರಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರತಿವರ್ಷದಂತೆ ಈ ವರ್ಷವು “ಕ್ರಿಯೆಯ ಮೂಲಕ ಭರವಸೆಯನ್ನು ಸೃಷ್ಟಿಸುವುದು” (ಅಡಿeಚಿಣiಟಿg ಊoಠಿe ಖಿhಡಿough ಂಛಿಣioಟಿ) ಎಂಬ ಘೋಷಣೆಯೊಂದಿಗೆ, ನಮ್ಮೆಲ್ಲರಲ್ಲಿ ಆತ್ಮವಿಶ್ವಾಸದ ಬೆಳಕನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ. ಆತ್ಮಹತ್ಯೆಯನ್ನು ನಿಯಂತ್ರಿಸುವ ಉದ್ದೇಶದ ಮೂಲಕ ಜನರ ಮಾನಸಿಕ ಆರೋಗ್ಯವನ್ನು ಸುಧಾರಿಸುವುದು ಮತ್ತು ಆತ್ಮವಿಶ್ವಾಸದೊಂದಿಗೆ ಕೌಶಲ್ಯದ ಮೂಲಕ ಜನರನ್ನು ಸಬಲೀಕರಣಗೊಳಿಸುವುದು. ಇಂತಹ ಸಂದರ್ಭದಲ್ಲಿ ಸೂಕ್ತವಾದ ಮನೋತಜ್ಞರನ್ನು ಮತ್ತು ಮನೋಸಾಮಾಜಿಕ ಆಪ್ತ ಸಮಾಲೋಚಕರನ್ನು ಬೇಟಿ ಮಾಡಿ ತಮ್ಮ ಮನಸ್ಸಿನಲ್ಲಿ ಇರತಕ್ಕಂತಹ ಭಾವನೆಗಳನ್ನು ವ್ಯಕ್ತ ಪಡಿಸಿಕೊಂಡು ತಮ್ಮ ಸಮಸ್ಯಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕು. ದೇವರು ಎಂಬ ಶಕ್ತಿ ಎಲ್ಲರನ್ನು ರಕ್ಷಣೆ ಮಾಡುತ್ತಿರುತ್ತದೆ, ಆದರೆ ನಮ್ಮ ಬಗ್ಗೆ ನಾವೇ ನಂಬಿಕೆ ಕಳೆದುಕೊಂಡಾಗ ದೇವರು ಕೂಡ ಏನೂ ಮಾಡಲಾರ, ಆದ್ದರಿಂದ ನಿಮ್ಮ ಆತ್ಮವಿಶ್ವಾಸ ಕಳೆದುಕೋಳ್ಳಬೇಡಿ. ಅದು ನಿಮ್ಮನ್ನೇ ಕಳೆದುಕೊಳ್ಳುವಂತೆ ಮಾಡುತ್ತದೆ. ಪ್ರತಿ ದಿನವನ್ನು ಹೊಸ ಭರವಸೆಯೊಂದಿಗೆ ಆಚರಿಸಿ ಬದುಕು ಸಾರ್ಥಕವಾಗುತ್ತದೆ. ಬೇರೆಯವರ ಜೀವನ ಚೆನ್ನಾಗಿದೆ ನನ್ನದು ಚೆನ್ನಾಗಿಲ್ಲ ಎಂದು ಹೋಲಿಕೆ ಮಾಡಿಕೊಳ್ಳಬಾರದು ಅದರಿಂದ ಮನಸ್ಸಿನಲ್ಲಿ ಜಿಗುಪ್ಸೆ, ನೀರಾಶೆ ಹತಾಶೆ ಉಂಟಾಗುತ್ತದೆ. ಇದರಿಂದ ಜೀವನವೇ ಬೇಡ ಎಂದು ನಿರ್ಧರಿಸಿ ಆತ್ಮಹತ್ಯೆ ಮಾಡಿಕೊಳ್ಳುವವರಿದ್ದಾರೆ. ಇದರಿಂದ ನಮ್ಮ ಜೀವನ ವ್ಯರ್ಥ್ಯವಾಗುತ್ತದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಿಶ್ವದಾದ್ಯಂತ ಪ್ರತಿ ವರ್ಷ ಸುಮಾರು ೮ ಲಕ್ಷಕ್ಕೂ ಹೆಚ್ಚು ಜನರು ಅಭಿವೃದ್ಧಿಹೊಂದುತ್ತಿರುವ ದೇಶಗಳಲ್ಲಿ ಆತ್ಮಹತ್ಯೆಯಿಂದ ಮರಣ ಹೊಂದುತ್ತಿದ್ದಾರೆ. ಅಂದರೆ ಪ್ರತಿ ೪೦ ಸೆಕೆಂಡಿಗೆ ೧ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಆತ್ಮಹತ್ಯೆಯು ಸುಮಾರು ೧೯ ರಿಂದ ೨೯ ವಯಸ್ಸಿನ ಯುವಕರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಮೂರನೇ ಎರಡರಷ್ಟು ಆತ್ಮಹತ್ಯೆ ಪ್ರಕರಣಗಳು ಬಡ ಮತ್ತು ಮಧ್ಯಮವರ್ಗದ ಕುಟುಂಬಗಳಲ್ಲಿ ಸಂಭವಿಸುತ್ತವೆ. ಆತ್ಮಹತ್ಯೆಯ ಪ್ರಕರಣಗಳು ನ್ಯಾಷನಲ್‌ಕ್ರೆಮರಿಪೋರ್ಟ ಬ್ಯೂರೋ (ಎ.ಸಿ.ಆರ್.ಬಿ) ವರದಿ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ ಸುಮಾರು ೧ ಲಕ್ಷಜನ ಆತ್ಮಹತ್ಯೆಯಿಂದ ಮರಣಹೊಂದುತ್ತಿದ್ದಾರೆ. ನಮ್ಮ ದೇಶದಲ್ಲಿ ಮಹಾರಾಷ್ಟ ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ೧೮ ರಿಂದ ೪೫ ವಯಸ್ಸಿನವರಲ್ಲಿ ಹೆಚ್ಚಾಗಿ ಕಂಡುಬಂದಿದ್ದು, ದೇಶದ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
ಆತ್ಮಹತ್ಯೆಗೆ ಖಿನ್ನತೆ ಹಲವು ಕಾರಣಗಳು:
ಮಿದುಳಿನಲ್ಲಿ ನರವಾಹಕಗಳ ಕೊರತೆ: ಮಿದುಳಿನಲ್ಲಿರುವ ಅಸಂಖ್ಯಾತ ನರಕೋಶಗಳ ಚಟುವಟಿಕೆಗಳ ಹಾಗೂ ರಾಸಾಯನಿಕಗಳ (ಡೋಪಮಿನ್, ಸೆರೋಟೊನಿನ್) ಹೆಚ್ಚು ಕಡಿಮೆಯಾಗುತ್ತಿರುವದರಿಂದ ಖಿನ್ನತೆಗೆ ತುತ್ತಾಗಬಹುದು. ಇಂಥವರಲ್ಲಿ ಪ್ರೀತಿ-ಪ್ರೇಮ, ಆಸಕ್ತಿ, ಆಹಾರದ ರುಚಿ ಮತ್ತು ಸಂತೋಷ ಕಡಿಮೆಯಾಗುತ್ತದೆ.
ಆನುವಂಶೀಯಕ: ಖಿನ್ನತೆ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಲ್ಲಿ, ಅನುವಂಶಿಕವಾಗಿ ಸ್ವಲ್ಪ ಪ್ರಮಾಣ ಹೆಚ್ಚಾಗಿ ಖಿನ್ನತೆ ಬರಬಹುದು.
ಹರ‍್ಮೋನುಗಳ ವ್ಯತ್ಯಾಸ: ದೇಹದಲ್ಲಿ ಥೈರಾಯಿಡ್ ಎಂಬ ಹರ‍್ಮೋನ ಕೊರತೆಯಿಂದ ಖಿನ್ನತೆಗೊಳಗಾಗಿ, ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳೆಲ್ಲಾ ನಿಧಾನವಾಗುವುದು ಕಂಡು ಬರುತ್ತದೆ.
ನಿರುದ್ಯೋಗ: ಆತ್ಮಹತ್ಯೆಗೆ ನಿರುದ್ಯೋಗ ಕೂಡ ಬಲವಾದ ಕಾರಣವಾಗಿರುತ್ತದೆ. ಬಡತನ, ಮೆನಯ ತೊಂದರೆಗಳು ಮತ್ತು ಹತಾಶತೆಯಂತಹ ಅಂಶಗಳ ಮೂಲಕ ಆತ್ಮಹತ್ಯೆಯ ಹೆಚ್ಚಾಗಬಹುದು.
ದೈಹಿಕ ಕಾಯಿಲೆ: ದೀರ್ಘಕಾಲಕ ದೈಹಿಕ ಅನಾರೋಗ್ಯ, ಕಿಬ್ಬೊಟ್ಟೆಯ ನೋವು ಮತ್ತು ಅಸಹಜ ಯೋನಿ ಡಿಸ್ಚಾರ್ಜ್, ಜಠರ ಹುಣ್ಣು ರೋಗ, ಅಧಿಕ ರಕ್ತದೊತ್ತಡ, ಶ್ವಾಸನಾಳದ ಆಸ್ತಮಾ ಮತ್ತು ತಂಬಾಕು ಮತ್ತು ಮದ್ಯಪಾನ ಇತ್ಯಾದಿ.
ಕೆಟ್ಟ ಚಟಗಳಿಂದ: ಮದ್ಯಪಾನ, ಧೂಮಪಾನ ಮತ್ತು ಗುಟಕಾ ಹಲವಾರು ಚಟಗಳಿಗೆ/ವ್ಯಸನಕ್ಕೆ ತುತ್ತಾದಾಗ ಮಿದುಳಿನಲ್ಲಿರುವ ನರಕೋಶಗಳ ಕುಗ್ಗುತ್ತದೆ. ಇದರಿಂದ ದೈಹಿಕ ಮತ್ತು ಮಾನಸಿಕ ಕ್ಷೀಣಿಸುತ್ತಾ ಖಿನ್ನತೆಗೆ ತುತ್ತಾಗುತ್ತಾರೆ.
ಇತರ ಕಾರಣಗಳು: ಆರ್ಥಿಕ ಸಮಸ್ಯೆ, ನಿರೂದ್ಯೋಗ, ಬಡತನ, ವ್ಯಾಪರದಲ್ಲಿ ಹಾನಿ, ಕೌಟುಂಬಿಕ ಸಮಸ್ಯೆ, ಅಸಾಮರಸ್ಯ, ವರದಕ್ಷಣೆ ಕಿರುಕುಳ ಸಾಮಾಜಿಕ ಸಮಸ್ಯೆ, ವಿವಾಹ ವಿಚ್ಚೆದನ, ಪ್ರೀತಿ ಪ್ರೇಮ ಭಗ್ನಗೊಂಡಾಗ, ಅತಿಯಾಗಿ ಮದ್ಯಪಾಪಾನ ಮತ್ತು ಧೂಮಪಾನ ಸೇವನೆ, ದುರ್ಬಲ ಮನಸ್ಸನ್ನು ಹೊಂದಿದವರು, ಸಮಸ್ಯಗಳನ್ನು ಸರಿಯಾಗಿ ಅರಿಯದೇ ಇರುವುದು, ಸರಿಯಾದ ಸಲಹೆಗಳು ಸಿಗದೇ ಇದ್ದಾಗ, ಈ ರೀತಿ ಸಮಸ್ಯೆಗಳುನ್ನು ಹೊಂದಿದವರು ಬಹುಷ ಆತ್ಮಹತ್ಯೆಗೆ ತುತ್ತಾಗುತ್ತಿದ್ದಾರೆ,
ಆತ್ಮಹತ್ಯೆ ಕಾಯಿಲೆಯ ಲಕ್ಷಣಗಳೆಂದರೆ ನಕಾರಾತ್ಮಕ ಆಲೋಚನೆಗಳು, ಕೇಲಸದಲ್ಲಿ ಆಸಕ್ತಿ ಇಲ್ಲದಿರುವುದು. ಊಟಮಾಡದೇ ಇರುವುದು, ನಿದ್ರೆಯಾಗದಿರುವುದು, ಲೈಂಗಿಕ ಆಸಕ್ತಿ ಕಡಿಮೆಯಾಗುವುದು, ದೈಹಿಕವಾಗಿ ಅಶಕ್ತತೆ ಕಾಣುವುದು, ಸುಸ್ತಾಗುವುದು, ಮತ್ತು ಮನಸ್ಸಿನಲ್ಲಿ ಉತ್ಸಾಹ ಇಲ್ಲದಿರುವುದು, ಒಂಟಿಯಾಗಿ ಕುಳಿತುಕೊಳ್ಳುವುದು, ಮತ್ತು ಅಳುವುದು ಹಿಗೇ ಹಲವಾರು ಆತ್ಮಹತ್ಯೆಯ ಲಕ್ಷಣಗಳಾಗಿವೆ.
ನಕಾರಾತ್ಮಕ ನೆಗೆಟೀವ್ ಮನೋಭಾವಗಳು: ಕೋಪ, ಭಯ, ದುಃಖ, ಅಸೂಯೆ, ಬೇಸರಿಕೆ, ಅಪರಾದ ಮನೋಭಾವನೆ ಈ ಲಕ್ಷಣಗಳು ಕಂಡುಬರುತ್ತವೆ.
ಭಾವನಾತ್ಮಕ ಆರೋಗ್ಯಕ್ಕಾಗಿ ಚಿಕಿತ್ಸೆಗಳು: ಸಕಾರಾತ್ಮಕ ಮನೋಭಾವಗಳು ಅಂದರೆ ಪ್ರೀತಿ, ಭರವಸೆ, ಬೆಂಬಲ, ಆಶಾವಾದ ಮತ್ತು ಆತ್ಮವಿಶ್ವಾಸ ಇವುಗಳನ್ನು ಜೀವನದಲ್ಲಿ ಬೆಳೆಸಿಕೊಳ್ಳಬೇಕು.
ಒತ್ತಡ ನಿವಾರಣೆಗಾಗಿ ಸರಳ ಸೂತ್ರಗಳು
ದಿನನಿತ್ಯ ಧ್ಯಾನ
ಯೋಗಾಸನಗಳು
ಪ್ರಾರ್ಥನೆ
ವ್ಯಾಯಾಮ
ಘಟನೆಗಳನ್ನು ಆತ್ಮೀಯರ ಜೊತೆಗೆ ಹಂಚಿಕೊಳ್ಳುವುದು
ಆತ್ಮಹತ್ಯೆ ತಡೆಗಟ್ಟಲು ಕ್ರಮಗಳು:
ಆತ್ಮಹತ್ಯೆ ವಿಚಾರಗಳನ್ನು ಮಾತನಾಡುವ ವ್ಯಕ್ತಿಯನ್ನು ಒಬ್ಬಂಟಿಯಾಗಿ ಬಿಡಬಾರದು, ಆತನ ಬಗ್ಗೆ ನಿಗಾ ವಹಿಸುವುದು, ಇಂತಹವರಿಗೆ ಭರವಸೆ, ದೈರ್ಯ, ಬೆಂಬಲದ ಮಾತುಗಳನ್ನು ಮಾತನಾಡುವುದು, ಬದುಕಿನ ಮಹತ್ವ ಮತ್ತು ಜೀವನದ ಸಂತೋಷದ ವಿಷಯಗಳನ್ನು ಅರ್ಥೈಸುವುದು, ಜೀವನದಲ್ಲಿ ಸೋಲು ಗೇಲುವಿನ ಸೋಪಾನ ಮುನ್ನುಗ್ಗಿ ನಡೆದರೆ ಗೆಲುವು ಖಚಿತ ಎಂಬ ಮಾತಿನೊಂದಿಗೆ ಜೀವನದ ಮಹತ್ವದ ತಿಳುವಳಿಕೆ ನಿಡುವುದು. ಆತ್ಮಹತ್ಯೆ ತಡೆಗಟ್ಟುವ ಕುರಿತು ಸಮುದಾಯದ ಮಟ್ಟದಲ್ಲಿ ಅರಿವಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಹೀಗೆ ಮಾಡುವುದರಿಂದ ಅವರು ತಮ್ಮ ಜೀವನದ ಶೈಲಿಯನ್ನು ಬದಲಿಸಿಕೊಂಡು ಹೊಸ ಜೀವನವನ್ನು ನಡೆಸುತ್ತಾರೆ.
ಚಿಕಿತ್ಸೆಗಳು:- ಆತ್ಮಹತ್ಯೆಯನ್ನು ನಿಯಂತ್ರಿಸುವಲ್ಲಿ ಮನೋವೈದ್ಯರ ಚಿಕಿತ್ಸೆ ಮತ್ತು ಮಾತುಗಳು, ರೋಗಿಯ ಕಾಯಿಲೆಯನ್ನು ಉಪಶಮನಗೊಳಿಸುತ್ತದೆ. ಇದರಿಂದ ರೋಗಿಯ ಮನಸ್ಸಿನ ಸಕಾರಾತ್ಮಕ ಬದಲಾವಣೆಗೆ ಅವಕಾಶ ಮಾಡಿಕೊಡುತ್ತದೆ. ಆ ವ್ಯಕ್ತಿಗಳಲ್ಲಿ ಚೈತನ್ಯವು ತುಂಬಿಕೊಳ್ಳುತ್ತದೆ. ಬದುಕಿನ ಮೇಲೆ ಭರವಸೆ ಬರುತ್ತದೆ. ಆಪ್ತ ಸಮಾಲೋಚನೆಯೇ ಆತ್ಮಹತ್ಯೆಗೆ ಪ್ರಮುಖ ಚಿಕಿತ್ಸೆಯಾಗಿದೆ. ಮನೋವಿಜ್ಞಾನಿಗಳ ಮತ್ತು ಮನೋವೈದ್ಯಕೀಯ ಸಮಾಜ ಕಾರ್ಯಕರ್ತರು ಹಾಗೂ ಇತರ ನಾಗರಿಕರು ಇದರಲ್ಲಿ ಭಾಗವಹಿಸಿ ಆತ್ಮಹತ್ಯೆಯಿಂದ ವಿಮುಖರನ್ನಾಗಿ ಮಾಡಬಹುದು. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕ ಆಸ್ಪತ್ರೆ ಮತ್ತು ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿ಼ಜ್ಷಾನ ಸಂಸ್ಥೆ (ಡಿಮ್ಹಾನ್ಸ್) ಧಾರವಾಡದಲ್ಲಿ ಅನೇಕ ತರಹದ ಮನೋಚಿಕಿತ್ಸೆಗಳು ಲಭ್ಯವಿದ್ದು, ಆತ್ಮಹತ್ಯೆಯ ವಿಚಾರದಿಂದ ಬಳಲುವವರು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬಹುದು. ಜನರು ತಮ್ಮ ಸಮಸ್ಯಗಳಿಗೆ ಸೂಕ್ತ ಪರಿಹಾರಕಂಡುಕೊಂಡು ಸ್ವಸ್ಥ ಸುಂದರ ಜೀವನ ನಡೆಸಬಹುದು.
ಶ್ರೀ ಆರ್. ಎಮ್. ತಿಮ್ಮಾಪೂರ
ಮನೋವೈದ್ಯಕೀಯ ಸಮಾಜಕಾರ್ಯಕರ್ತರು
ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿ಼ಜ್ಷಾನ ಸಂಸ್ಥೆ
(ಡಿಮ್ಹಾನ್ಸ್) ಧಾರವಾಡ. ಮೊ: ೯೮೮೬೨೮೧೨೨೦