ಡಿಮ್ಹಾನ್ಸ್ ಸಂಸ್ಥೆಯಲ್ಲಿ ದೀರ್ಘಾವಧಿ ನೋವು ಚಿಕಿತ್ಸೆ ಕೇಂದ್ರ ಉದ್ಘಾಟನೆ

Pain Clinic

ಧಾರವಾಡ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯಲ್ಲಿ 15 ಜೂನ್ 2022 ರಂದು ಮಧ್ಯಾಹ್ನ 12 ಘಂಟೆಗೆ ದೀರ್ಘ ಕಾಲದ ನೋವಿನ ಚಿಕಿತ್ಸಾ ಕೇಂದ್ರವನ್ನು ಡಿಮ್ಹಾನ್ಸ್ ನಿರ್ದೇಶಕರಾದ ಡಾ.ಮಹೇಶ್ ದೇಸಾಯಿ ಅವರಿಂದ ಉದ್ಘಾಟನೆ ಮಾಡಲಾಯಿತು. ಈ ಚಿಕಿತ್ಸಾ ಕೇಂದ್ರದ ಉದ್ದೇಶಗಳ ಬಗ್ಗೆ ನಿರ್ದೇಶಕರು ಮಾಹಿತಿ ನೀಡಿ ಮಾತನಾಡಿದ ಇವರು, ಜನಸಾಮಾನ್ಯರಲ್ಲಿ ದೀರ್ಘಾವಧಿ ಕಾಯಿಲೆಗಳು ಕಂಡುಬಂದಲ್ಲಿ ಹಲವು ಜನರು ವೈದ್ಯರ ಮಾರ್ಗದರ್ಶನವಿಲ್ಲದೇ ತಾವೇ ಮಾತ್ರಗಳನ್ನು ನೋವು ಕಡಿಮೆ ಮಾಡಿಕೊಳ್ಳಲು ತೆಗೆದುಕೊಳ್ಳುತ್ತಾರೆ. ಇದು ಸರಿಯಲ್ಲ. ವೈದ್ಯರ ಮಾರ್ಗದರ್ಶನ ಅವಶ್ಯಕವಾಗಿರುತ್ತದೆ ಎಂದು ಸಲಹೆ ನೀಡಿದರು.  ನಂತರ ಅರವಳಿಕೆ ವಿಭಾಗದ ಮುಖ್ಯಸ್ಥರಾದ ಡಾಕ್ಟರ್ ಉಮೇಶ್ ಜಿ ಅವರು ಮಾತನಾಡಿ ನೋವು ಚಿಕಿತ್ಸಾ ಕೇಂದ್ರದ ಉಪಯೋಗ ಯಾವ ರೋಗಿಗಳಿಗೆ ಆಗುತ್ತದೆ ಎಂದು ವಿವರಿಸಿದರು. ಹಲವಾರು ವಿಭಾಗಗಳ ಜತೆಗೂಡಿ ನೋವು ಶಮನ ಮಾಡುವುದರ ಅವಶ್ಯಕತೆ ಮತ್ತು ಉಪಯುಕ್ತತೆಯ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಆಡಳಿತಾಧಿಕಾರಿ ಡಾ.ಡಿ ಶಣ್ಮುಖ ಡಿ, ಪ್ರಭಾರಿ ವೈದ್ಯಕೀಯ ಅಧೀಕ್ಷಕರಾದ ಡಾ.ರಾಘವೇಂದ್ರ ನಾಯಕ್, ದೀರ್ಘ ನೋವು ಉಪಶಮನ ತಜ್ಞೆ ಡಾಕ್ಟರ್ ಜಸ್ವಿಂದರ್, ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. 60 ಕ್ಕೂ ಹೆಚ್ಚು ರೋಗಿಗಳು ಮತ್ತು ಅವರ ಸಂಬಂಧಿಕರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಹಲವಾರು ರೋಗಿಗಳ ಬಂಧುಗಳು ತಮ್ಮ ಊರಿನಲ್ಲಿರುವ ರೋಗಿಗಳನ್ನು ಇಲ್ಲಿಗೆ ತಪಾಸಣೆ ಹಾಗೂ ಆರೈಕೆಗಾಗಿ ಕರೆತರುವುದಾಗಿ ತಿಳಿಸಿದರು. ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ವತಿಯಿಂದ ಅವರು ಹುಬ್ಬಳ್ಳಿ ಧಾರವಾಡ ಜಿಲ್ಲೆಯ ಎಲ್ಲಾ ಕಡೆ ಈ ವಿಷಯ ಜನರಿಗೆ ತಿಳಿಸಿ ಇದರ ಪ್ರಯೋಜನ ಆಗುವಂತಹ ರೋಗಿಗಳನ್ನು, ಧಾರವಾಡ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯ ಈ ವಿಭಾಗಕ್ಕೆ ಕಳುಹಿಸುವುದಾಗಿ ತಿಳಿಸಿದರು.

ರೋಗಿಗಳಿಗೆ ಕೆಲವು ಮಾಹಿತಿ :

ನಿಮಗೆ 6-8 ವಾರಕ್ಕಿಂತಲೂ ಹೆಚ್ಚು ಕಾಲದಿಂದ ನೋವು ನಿವಾರಣೆ ಆಗಿಲ್ಲವೇ?

ಆ ನೋವಿನಿಂದ ದೇಹದ ಹಲವಾರು ಭಾಗಗಳಿಗೆ ತೊಂದರೆ ಆಗುತ್ತಿದೆಯೇ?

ತಮ್ಮ ದಿನ ನಿತ್ಯದ ಕೆಲಸ ಮಾಡಲು ಕಷ್ಟ ಆಗುತ್ತ ಇದೆಯೇ?

ನೋವಿನಿಂದಾಗಿ ಸರಿಯಾಗಿ ನಿದ್ದೆ ಮಾಡಲು ಆಗುತ್ತಿಲ್ಲವೇ?

ಹಾಗಿದ್ದಲ್ಲಿ ಕೂಡಲೇ ಡಿಮ್ಹಾನ್ಸ್ ಸಂಸ್ಥೆಯ ದೀರ್ಘ ಕಾಲದ ನೋವು ನಿವಾರಣೆ ಕೇಂದ್ರ ಸಂಪರ್ಕಿಸಿ.

ರೋಗಿಗಳು ಈ ಕೇಂದ್ರದಿಂದ ಏನನ್ನು ಬಯಸಬಹುದು:

ಸೂಕ್ತ ಮದ್ದು ಚಿಕಿತ್ಸೆ, ಸರಿಯಾದ ವ್ಯಾಯಾಮ ನಿಯಮಗಳ ತಿಳುವಳಿಕೆ, ಬೇರೆ ವಿಭಾಗಗಳ ತಜ್ಞರ ಸಲಹೆ

ರೋಗಿಗಳು ಏನನ್ನು ಬಯಸಬಾರದು:

ತಕ್ಷಣ ನೋವು ಶಮನ – ದೀರ್ಘ ಕಾಲದ ನೋವು ಕೇವಲ ಒಂದು ಅಂಗಕ್ಕೆ ಸೀಮಿತವಾಗದೆ, ದೇಹದ ಬೇರೆ ಅಂಗಗಳು ಮತ್ತು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಹಲವಾರು ತಿಂಗಳುಗಳ ಸೂಕ್ತ ಚಿಕಿತ್ಸೆಯ ನಂತರ ನೂರರಲ್ಲಿ 50 ಕ್ಕಿಂತ ಹೆಚ್ಚು ಭಾಗದಷ್ಟು ನೋವು ನಿವಾರಣೆ ಆಗುವುದು.ಮುಲಾಮು, ಮದ್ದು, ಮಾತ್ರೆ, ಇಂಜೆಕ್ಷನ್ಗಳಿಂದ ಮಾತ್ರ ಈ ನೋವನ್ನು ಹೋಗಲಾಡಿಸಲು ಆಗುವುದಿಲ್ಲ. ತುಂಬಾ ಮದ್ದಿಗೆ ಶರಣಾದರೆ – ಮದ್ದು ವ್ಯಸನಿಗಳು ಆಗುತ್ತೀರಿ. ಪ್ರತಿ ಮದ್ದು ಕೂಡ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಲ್ಲದು. ಮಿತವಾಗಿ, ಬೇಕಿದ್ದ್ದಷ್ಟು ಮಾತ್ರ ಸೇವಿಸಿ, ಸರಿಯಾದ ವ್ಯಾಯಾಮ, ಜೀವನ ಕ್ರಮ, ಉತ್ತಮ ಆಲೋಚನೆಗಳಿಂದ ತಮ್ಮಆರೋಗ್ಯ ಸಧೃಡ ಆಗಬಲ್ಲದು.

 

ಇತ್ತೀಚಿನ ನವೀಕರಣ​ : 18-06-2022 09:34 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ-ಧಾರವಾಡ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080