ಒಳರೋಗಿ ಕೋವಿಡ್ ವ್ಯಾಕ್ಸಿನೇಷನ್ ಅಭಿಯಾನ

ಡಿಮ್ಹಾನ್ಸ್ ಒಳರೋಗಿಗಳಿಗೆ ಕೋವಿಡ್ ಲಸಿಕೆಯ ಅಭಿಯಾನ.

DIMHANS Inpatient Covid Vaccination Campaign

ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ (ಡಿಮ್ಹಾನ್ಸ್) ಸಂಸ್ಥೆಯು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಜಿಲ್ಲಾ ಅಂಗವಿಕಲ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಡಿಮ್ಹಾನ್ಸ್ ಸಂಸ್ಥೆಯಲ್ಲಿ ದಾಖಲಾದ, ನ್ಯಾಯ ವೈದ್ಯಕೀಯ ವಿಭಾಗದ ಮತ್ತು ಧೀರ್ಘಕಾಲೀನವಾಗಿ ಸಂಸ್ಥೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯುತ್ತಿರುವಂಥ ಎಲ್ಲ ಮನೋರೋಗಿಗಳಿಗೆ ಕೋವಿಡ್ ಲಸಿಕೆಯನ್ನು ಹಾಕಲಾಯಿತು. ಇಂಥ ರೋಗಿಗಳಿಗೆ ಸಂಬಂಧಿಕರಾರು ಇಲ್ಲದೇ ಇರುವಂತಹ  ಮತ್ತು ಸರಕಾರ ಇಂತಹ ಜನರಿಗೆ ಲಸಿಕೆಯ ಸೌಲಭ್ಯವನ್ನು ದೊರಕಿಸುವಂತೆ ಆದೇಶವನ್ನು ಹೊರಡಿಸಿದ್ದರಿಂದ, ಲಸಿಕಾ ಕಾರ್ಯಕ್ರವiವನ್ನು ಗುರುವಾರ ದಿನಾಂಕ ೨೭/೦೫/೨೦೨೧ ರಂದು ಹಮ್ಮಿಕೊಳ್ಳಲಾಗಿತ್ತು. ಈ ಸಂಸ್ಥೆಯ ೪೯ಜನ ಮಹಿಳೆ ಮತ್ತು ಪುರುಷ ಮನೋರೋಗಿಗಳು ಕೋವಿಡ್ ಲಸಿಕೆಯನ್ನು ಪಡೆದುಕೊಂಡರು. ಈ ಕಾರ್ಯಕ್ರಮಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡದ ನ್ಯಾಯಾಧೀಶರಾದ ಶ್ರೀ ಚಿನ್ನಣ್ಣವರ ಆರ್. ಎಸ್. ಇವರು ಲಸಿಕೆ ನೀಡುವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಡಿಮ್ಹಾನ್ಸ್ ಸಂಸ್ಥೆಯ ನಿರ್ದೇಶಕರಾದ ಡಾ|| ಮಹೇಶ ದೇಸಾಯಿ, ವೈದ್ಯಕೀಯ ಅಧೀಕ್ಷಕರಾದ ಡಾ|| ಶ್ರೀನಿವಾಸ ಕೊಸಗಿ, ಜಿಲ್ಲಾ ವಿಕಲಚೇತನರ ಅಧಿಕಾರಿಗಳಾದ ಶ್ರೀ ಡಿ.ಎನ್. ಮೂಲಿಮನಿ, ಆರೋಗ್ಯ ಅಧಿಕಾರಿಗಳಾದ ಡಾ|| ಜ್ಯೋತಿ ಉಡುಪಿ, ಮನೋವೈದ್ಯಕೀಯ ನರ್ಸಿಂಗ್ ಪ್ರಾಧ್ಯಾಪಕರಾದ ಡಾ|| ಆರ್ ಶ್ರೀವಾಣಿ, ಮನೋವೈದ್ಯಕೀಯ ಸಮಾಜ ಕಾರ್ಯಕರ್ತರಾದ ಶ್ರೀ ಅಶೋಕ ಕೋರಿ, ಶ್ರೀ ಆರ್.ಎಮ್.ತಿಮ್ಮಾಪೂರ, ಶುಶ್ರೂಷಕ ಅಧಿಕಾರಿಗಳಾದಂಥ ಕಸ್ತೂರಿ ಕಮ್ಮಾರ, ಗಿರಿಜಾ ಮನೋಹರಿ, ಚಂದ್ರಕಲಾ, ಆಶಾ, ಶಾಂತಮೇರಿ, ಅನೀಲ್ ಚವ್ಹಾಣ, ಬಾಳಪ್ಪಾ ಪೂಜಾರಿ, ಸರಳಾ ಮಡ್ಲಿ, ಮತ್ತು ಮಲ್ಲಮ್ಮಾ ಪಾಟೀಲ್ ಇವರೆಲ್ಲರೂ ಹಾಜರಿದ್ದರು.

ಮುಂದಿನ ಎರಡನೇ ಹಂತದ ಕೊವಿಡ್ ಲಸಿಕಾ ಅಭಿಯಾನದಲ್ಲಿ, ಡಿಮ್ಹಾನ್ಸ್ ಸಂಸ್ಥೆಗೆ ಚಿಕಿತ್ಸೆಗಾಗಿ ಬರುತ್ತಿರುವಂಥ ರೋಗಿಗಳಲ್ಲಿ ಸುಮಾರು ೯೦ರಷ್ಟು ಧೀರ್ಘಕಾಲೀನವಾಗಿ ಬಳಲುತ್ತಿರುವಂಥ ಮನೋರೋಗಿಗಳಿಗೆ ಮತ್ತು ಹಗಲು ಪಾಲನಾ ಕೇಂದ್ರಕ್ಕೆ ಬರುತ್ತಿರುವಂಥ ರೋಗಿಗಳಿಗೆ ಲಸಿಕೆಯನ್ನು ಹಾಕಲಾಗುವುದು. ಡಿಮ್ಹಾನ್ಸ್ ಸಂಸ್ಥೆಯಿಂದ ಮಾನಸಿಕ ಅಂಗವಿಕಲತೆಯ ಪ್ರಮಾಣಪತ್ರವನ್ನು ಪಡೆದ ರೋಗಿಗಳನ್ನು ಗುರುತಿಸಿ, ದೂರದ ಬೇರೆ ಬೇರೆ ಊರುಗಳಿಂದ ಬರುವವರಿಗೆ ಲಸಿಕೆಯನ್ನು ನೀಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಇದಕ್ಕಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಇಬ್ಬರು ಅರೆ ಕಾನೂನು ಸ್ವಯಂ ಸೇವಕರನ್ನು ನೇಮಕ ಮಾಡಿದ್ದು, ಶ್ರೀ ಅಶೋಕ ಕೋರಿ ಮತ್ತು ನಾಗರಾಜ ಹೂಗಾರ ಇವರು ಡಿಮ್ಹಾನ್ಸ್ ಸಂಸ್ಥೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರುಗಳು ಸರಕಾರದ ಇತರ ಇಲಾಖೆಗಳ ಸಹಯೋಗದೊಂದಿಗೆ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳುತ್ತಿದ್ದಾರೆ.ಡಿಮ್ಹಾನ್ಸ್ ಸಂಸ್ಥೆಯಿಂದ ಮುಂದಿನ ಹಂತದಲ್ಲಿ ನಿರಾಶ್ರತರ ಪರಿಹಾರ ಕೇಂದ್ರ, ರಾಯಾಪುರ, ರಾಜ್ಯ ಮಹಿಳಾ ನಿಲಯ ಹುಬ್ಬಳ್ಳಿ, ಮತ್ತು ಖಾಸಗಿ ಮಾನಸಿಕ ಆಸ್ಪತ್ರೆಗಳಿಗೆ ಬರುವಂಥ ಮನೋರೋಗಿಗಳಿಗೆ ಕೊವಿಡ್ ಲಸಿಕೆಯನ್ನು ಹಾಕಿಸಬೇಕೆಂಬ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಭಾರತಕ್ಕೆ ಕೊವಿಡ್ ೧೯ ಸಾಂಕ್ರಾಮಿಕವಾಗಿ ಹರಡುತ್ತಾ ಬಂದಾಗಿನಿಂದ, ಡಿಮ್ಹಾನ್ಸ್ ಸಂಸ್ಥೆಯು ಕೊವಿಡ್ ೧೯ ನಿಯಂತ್ರಿಸಲು ಹಲವಾರು ವಿಧದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲಾ ಆಸ್ಪತ್ರೆಯ ಕಟ್ಟಡವನ್ನು ಬಳಸಿಕೊಂಡು, ಡಿಮ್ಹಾನ್ಸ್ ಸಂಸ್ಥೆಯು ೧೨೫ ಹಾಸಿಗೆಯ ಸೌಲಭ್ಯವನ್ನು ಹೊಂದಿದ, ಕೊವಿಡ್ ಸೋಂಕಿತರಿಗಾಗಿಯೇ ಚಿಕಿತ್ಸೆಯನ್ನು ತನ್ನ ತಂಡದೊಂದಿಗೆ ನೀಡುತ್ತಿದೆ. ಮತ್ತು ದೂರವಾಣಿ ಮುಖಾಂತರ ಸೊಂಕಿತರಿಗೆ ಮತ್ತು ಸೋಂಕಿತರ ಸಂಬಂಧಿಕರಿಗೆ ಸಲಹೆ-ಸಮಾಧಾನವನ್ನು ನೀಡಲಾಗುತ್ತಿದೆ. ಮೊದಲ ಹಂತದ ಅಲೆಯಲ್ಲಿ ಸುಮಾರು ೧೫,೦೦೦ ಕೊವಿಡ್ ಸೋಂಕಿತರಿಗೆ ಆಪ್ತ ಸಮಾಲೋಚನೆಯನ್ನು ನೀಡಲಾಗಿದ್ದು, ಎರಡನೇ ಹಂತದ ಅಲೆಯಲ್ಲಿ ಸುಮಾರು ೩೦೦೦ ಕೋವಿಡ್ ಸೋಂಕತರಿಗೆ ಆಪ್ತಸಮಾಲೋಚನೆಯನ್ನು ಮಾಡಲಾಗಿದೆ. ಡಿಮ್ಹಾನ್ಸ್ ಸಂಸ್ಥೆಯ ಕೋವಿಡ್ ಪರೀಕ್ಷೆಯ ಪ್ರಯೋಗಾಲಯ(ಲ್ಯಾಬ್) ಕೂಡ ಅತ್ಯಂತ ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿಯವರೆಗೆ ೩.೮ಲಕ್ಷ ಜನರ ಪರೀಕ್ಷೆಯನ್ನು ಮಾಡಲಾಗಿದ್ದು, ದಿನಾಲು ೨೦೦೦ ಜನರ ಪರೀಕ್ಷೆಯನ್ನು ಮಾಡಲಾಗುತ್ತಿದೆ. ಇವರೆಲ್ಲರೂ ಮಾಡುತ್ತಿರುವಂಥ ಕಾರ್ಯಕ್ಕೆ ಮತ್ತು ಪ್ರತಿಯೊಬ್ಬ ಸಿಬ್ಬಂದಿಯನ್ನು, ಮತ್ತು ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿರುವಂಥ ವಿದ್ಯಾರ್ಥಿಗಳಿಗೆ ಪ್ರೋತ್ಸಹಿಸಿ, ಇಂತಹ ಕಠಿಣ ಪರಿಸ್ಥಿತಿಯಲ್ಲಿ ಜನರಿಗೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸಲು ಪ್ರೆರೇಪಿಸುತ್ತಿದ್ದಾರೆ.

ಅನುವಾದ:
ಶ್ರೀಮತಿ ಶ್ರೀದೇವಿ ಬಿರಾದಾರ
ಮನೋವೈದ್ಯಕೀಯ ಸಮಾಜ ಕಾರ್ಯಕರ್ತೆ
ಮನೋವೈದ್ಯಕೀಯ ಸಮಾಜ ಕಾರ್ಯವಿಭಾಗ
ಡಿಮ್ಹಾನ್ಸ್, ಧಾರವಾಡ.

 

ಇತ್ತೀಚಿನ ನವೀಕರಣ​ : 20-06-2021 08:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ-ಧಾರವಾಡ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080