ಚಿತ್ರ ಸಂಪುಟ

ಕ್ರ.ಸಂ.

ಇಲಾಖಾ ಕಾರ್ಯಕ್ರಮಗಳ ಭಾವಚಿತ್ರಗಳು

ಡೌನ್ಲೋಡ್

1.

72 ನೇಯ ಗಣರಾಜ್ಯೋತ್ಸವದ ಅಂಗವಾಗಿ ಡಿಮ್ಹಾನ್ಸ್ ಸಂಸ್ಥೆಯಲ್ಲಿ ಮಾನ್ಯ ನಿರ್ದೇಶಕರಾದ ಡಾ|| ಮಹೇಶ ದೇಸಾಯಿರವರು  ದ್ವಜಾರೋಹಣ ನೆರವೇರಿಸಿದರು

ವೀಕ್ಷಿಸಿ

2.

ಡಿಮ್ಹಾನ್ಸ್ ಸಂಸ್ಥೆಯ ಆವರಣದಲ್ಲಿ ನಿರ್ಮಿಸಲಾದ ಬೇಂದ್ರೆ ಬ್ಲಾಕ್ ಕಟ್ಟಡವನ್ನು ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ ಪ್ರಲ್ಹಾದ್ ಜೋಶಿರವರು ಉದ್ಘಾಟಿಸಿದರು ಮತ್ತು ವಿವಿದ ಗಣ್ಯರು ಉಪಸ್ಥಿತರಿದ್ದುರು.

ವೀಕ್ಷಿಸಿ

3.

ಡಿಮ್ಹಾನ್ಸ್ ಸಂಸ್ಥೆಗೆ ರೋಟರಿ ಕ್ಲಬ್ ಧಾರವಡ,ತಂಡದವರು ಭೇಟಿ ನೀಡಿದ ಕ್ಷಣ

ವೀಕ್ಷಿಸಿ

4.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಡಿಮ್ಹಾನ್ಸ್ ಆಸ್ಪತ್ರೆ ಸಭಾಂಗಣ

ವೀಕ್ಷಿಸಿ

5.

ಡಿಮ್ಹಾನ್ಸ್ ಸಂಸ್ಥೆಗೆ ,ಎಲ್ಐಸಿ ತಂಡದವರು ಭೇಟಿ ನೀಡಿದ ಕ್ಷಣ

ವೀಕ್ಷಿಸಿ

6.

ಡಿಮ್ಹಾನ್ಸ್ ಸಂಸ್ಥೆಯ ಸಿಬ್ಬಂದಿಗಳಿಗೆ ಕೋವಿಡ್-19 ಲಸಿಕೆಯನ್ನು ನೀಡಿದ ಕ್ಷಣ

ವೀಕ್ಷಿಸಿ

7.

ಸಂಗೀತ ಚಿಕಿತ್ಸೆ ಮತ್ತು ಸಂಶೋಧನಾ ಘಟಕದ ಉದ್ಘಾಟನೆ   ಸಮಾರಂಭ

 ವೀಕ್ಷಿಸಿ

8.

75 ನೇಯ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಡಿಮ್ಹಾನ್ಸ್ ಸಂಸ್ಥೆಯಲ್ಲಿ ಮಾನ್ಯ ನಿರ್ದೇಶಕರಾದ ಡಾ|| ಮಹೇಶ ದೇಸಾಯಿರವರು ದ್ವಜಾರೋಹಣ ನೆರವೇರಿಸಿದರು.  

ವೀಕ್ಷಿಸಿ

9.

IPS-SZ PGCME 2021

ವೀಕ್ಷಿಸಿ

10.

ಡಿಮ್ಹಾನ್ಸ್ ಧಾರವಾಡ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಧಾರವಾಡ ಮತ್ತು ಕೃಷಿ ಸಮುದಾಯ ರೇಡಿಯೋ ಸಹಯೋಗದೊಂದಿಗೆ ಆತ್ಮಹತ್ಯೆ ತಡೆ ಜಾಗೃತಿ ಕಾರ್ಯಕ್ರಮವನ್ನು ಅಯೋಗಿಸಲಾಗಿತ್ತು. ಡಿಮ್ಹಾನ್ಸ್ ನ ನಿರ್ದೇಶಕರಾದ ಡಾ.ಮಹೇಶ್ ದೇಸಾಯಿ ಮತ್ತು ಡಿಮ್ಹಾನ್ಸ್ ನ ಮನೋವೈದ್ಯಕೀಯ ನರ್ಸಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸುನಂದ ಜಿ ಟಿ ಅವರು ಧಾರವಾಡ ಜಿಲ್ಲೆಯ ರೈತರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. 

ವೀಕ್ಷಿಸಿ

11.

ಆತ್ಮಹತ್ಯಾ ತಡೆಗಟ್ಟುವಿಕೆ ದಿನ- ಮನೋವೈದ್ಯಕೀಯ ಶುಶ್ರೂಷಾ ಪಿಜಿ ವಿದ್ಯಾರ್ಥಿಗಳ ವಿಭಾಗ ಮತ್ತು ಡಾ. ಸುನಂದ ಜಿ ಟಿ, ಸಹಾಯಕ ಪ್ರಾಧ್ಯಾಪಕರು, ಡಿಮ್ಹಾನ್ಸ್ ಧಾರವಾಡ, ಜಿಲ್ಲಾ ಆಸ್ಪತ್ರೆಯ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳಿಗೆ "ಯುವಕರಲ್ಲಿ ಆತ್ಮಹತ್ಯೆ ತಡೆಗಟ್ಟುವಿಕೆ" ಕುರಿತು ಸೆಮಿನಾರ್ನ್ನು ಅಯೋಗಿಸಿ ಚರ್ಚೆ ನಡೆಸಿದರು.

ವೀಕ್ಷಿಸಿ

12.

ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆಯು ಡಿಮ್ಹಾನ್ಸ್ ಆಸ್ಪತ್ರೆಯ ಸಭಾಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಧಾರವಾಡ ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಸಹಯೋಗದಲ್ಲಿ “ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ” ಅಂಗವಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ.

ವೀಕ್ಷಿಸಿ

13.

ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ (ಡಿಮ್ಹಾನ್ಸ್) ಯ ಸಭಾಂಗಣದಲ್ಲಿ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ದಿನಾಚರಣೆ ಯ ನಿಮಿತ್ತ  "ಆರೋಗ್ಯ ಮಂಥನ ಹಾಗೂ ಆಯುಷ್ಮಾನ್ ಭಾರತ್ ಪಕ್ವಾರ್" ಕಾರ್ಯಕ್ರಮವನ್ನು  ದಿನಾಂಕ 23.09.2021 ರಂದು ಆಯೋಜಿಸಲಾಗಿತ್ತು.

ವೀಕ್ಷಿಸಿ

14.

ಡಿಮ್ಹಾನ್ಸ್, ಧಾರವಾಡ, ಮನೋವೈದ್ಯಕೀಯ ನರ್ಸಿಂಗ್ ವಿಭಾಗ, 2 ನೇ ವರ್ಷದ ಎಂ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಾದ ಶ್ರೀ.ಜಿತೇಂದ್ರ, ಶ್ರೀಮತಿ ಪ್ರತಿಭಾ, ಶ್ರೀ.ಅನಿಲ್ ಕಟ್ಟಿ ಮತ್ತು ಶ್ರೀಮತಿ.ಶಶಿಕಲಾ 5/10/2021 ರಂದು ನರ್ಸಿಂಗ್ ವಿಷಯದ ಕುರಿತು ಸಂಸ್ಥೆಯ ನರ್ಸಿಂಗ್ ಅಧಿಕಾರಿಗಳಿಗಾಗಿ ಸಿಎನ್ಇ ಆಯೋಜಿಸಿದರು ಡಾಕ್ಯುಮೆಂಟೇಶನ್: ಪುನರುಜ್ಜೀವನಕ್ಕೆ ಒಂದು ಹೆಜ್ಜೆ, ಅಧ್ಯಾಪಕರಾದ ಡಾ ಆರ್ ಶ್ರೀವಾಣಿ, ಡಾ ಸುನಂದ ಜಿ ಟಿ., ಮತ್ತು ಡಾ ಸುಶೀಲ್ ಕುಮಾರ್ ಆರ್ . ಶ್ರೀ ಎಂಡಿ. ಇಸಾಕ್, ನರ್ಸಿಂಗ್ ಅಧಿಕಾರಿ ಸಿಎನ್ಇ, ಶ್ರೀಮತಿ ಶಾಂತಮರಿ ಉಸ್ತುವಾರಿ ನರ್ಸಿಂಗ್ Superintendent ರವರು ಸಿಎನ್ಇ ಉದ್ಘಾಟಿಸಲಾಯಿತು. ಸಿಎನ್ಇಯಲ್ಲಿ ಸುಮಾರು 15 ಕ್ಕೂ ಹೆಚ್ಚು ನರ್ಸಿಂಗ್ ಅಧಿಕಾರಿಗಳು ಭಾಗವಹಿಸಿದ್ದರು

 

 

ವೀಕ್ಷಿಸಿ

15.

ಮನೋವೈದ್ಯಕೀಯ ಶುಶ್ರೂಷಾ ವಿಭಾಗ, ಡಿಮ್ಹಾನ್ಸ್ ವಿಶ್ವ ಮಾನಸಿಕ ಆರೋಗ್ಯ ದಿನ 2021 ರ ಮುನ್ನಾದಿನದಂದು ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಪ್ರಥಮ ವರ್ಷದ ಎಂಎಸ್ ಸಿ ವಿದ್ಯಾರ್ಥಿಗಳಾದ ಶ್ರೀ.ಪ್ರಶಾಂತ್ ಬೇವೂರ್, ಶ್ರೀ ಎಂಡಿ.ಜೂಬರ್, ಶ್ರೀ.ಸಾಗರ್ ಅವರು ಅಧ್ಯಾಪಕರಾದ ಡಾ. ಸುನಂದ ಜಿಟಿ ಅವರ ಸಹಯೋಗದಲ್ಲಿ ನಡೆಸಿದರು ಧಾರವಾಡದ ಪ್ರೆಸೆಂಟೇಶನ್ ಗರ್ಲ್ಸ್ ಹೈಸ್ಕೂಲ್, ಸುಮಾರು 120 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

 ವೀಕ್ಷಿಸಿ

16.

ಧಾರವಾಡ ಜಿಲ್ಲಾ ಪೋಲಿಸ್ ಮತ್ತು ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಿಗಳ ಸಂಸ್ಥೆ (ಡಿಮ್ಹಾನ್ಸ್) ಸಹಯೋಗದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ ವೃತ್ತಿ ನಿರತ ಪೋಲಿಸ್ ಅಧಿಕಾರಿಗಳಲ್ಲಿ ಹಾಗೂ ಸಿಬ್ಬಂದಿಗಳಲ್ಲಿ ಒತ್ತಡ ನಿರ್ವಹಣೆ ಕುರಿತು ಕಾರ್ಯಾಗಾರವನ್ನು ಇಂದು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆ ಸ್ಥಾನವನ್ನು ಶ್ರೀ ಎಮ್.ಬಿ. ಸಂಕದ ರವರು, ಡಿ.ವೈ.ಎಸ್.ಪಿ, ಧಾರವಾಡ ಗ್ರಾಮೀಣ ರವರು ವಹಿಸಿದ್ದರು. ಮಾನಸಿಕ ಆರೋಗ್ಯದ ಕುರಿತು ವಿಶೇಷ ಉಪನ್ಯಾಸವನ್ನು ಡಿಮ್ಹಾನ್ಸ್ ಸಂಸ್ಥೆಯ ನಿರ್ದೇಶಕರಾದ ಡಾ.ಮಹೇಶ್ ದೇಸಾಯಿ ರವರು ನೀಡಿದರು. ಮಾನಸಿಕ ಕಾಯಿಲೆಗೆ ಚಿಕಿತ್ಸೆ ಮಹತ್ವದ ಬಗ್ಗೆ ಸವಿವರವಾಗಿ ತಿಳಿಸಿದರು. ಡಾ.ಸಾಹಿತ್ಯ, ಸಹಾಯಕ ಪ್ರಾಧ್ಯಾಪಕರು, ಡಿಪಾರ್ಟ್ಮೆಂಟ್ ಆಫ್ ಕ್ಲಿನಿಕಲ್ ಸೈಕಾಲಜಿ, ಡಿಮ್ಹಾನ್ಸ್ ಇವರು ಒತ್ತಡ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು.‌ಡಾ.ಶ್ರೀಧರ್ ಕುಲಕರ್ಣಿ ರವರು ಒತ್ತಡ‌ ನಿರ್ವಹಣೆಯಲ್ಲಿ ವಿವಿಧ ಸಂಗೀತ ರಾಗಗಳ ಬಗ್ಗೆ ವಿವರಿಸಿದರು. ಶ್ರೀ ಚಂದ್ರಕಾಂತ ಪೂಜಾರಿ, ಡಿ.ವಾಯ್.ಎಸ್.ಪಿ, ಡಿ.ಸಿ.ಆರ್.ಬಿ, ಎಸ್.ಪಿ. ಆಫಿಸ್, ಧಾರವಾಡ ರವರು ಅತಿಥಿ ಸ್ಥಾನವಹಿಸಿದ್ದರು. ಶ್ರೀ ಅಶೋಕ ಕೋರಿ, ಯೋಜನಾ ಸಂಯೋಜಕರು, ಡಿಮ್ಹಾನ್ಸ್ ಈ ಕಾರ್ಯಕ್ರಮವನ್ನು ಸಂಯೋಜಿಸಿದರು. ಶ್ರೀ ವಿಜಯಕುಮಾರ್, ವೆಲ್ ಬೀಯಿಂಗ್ ಆಫಿಸರ್, ಧಾರವಾಡ ಇವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಧಾರವಾಡ ನಗರದ ವಿವಿಧ ಪೋಲಿಸ್ ಠಾಣೆ ಪೋಲಿಸ್ ಸಿಬ್ಬಂದಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

 ವೀಕ್ಷಿಸಿ

17.

ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ (ಡಿಮ್ಹಾನ್ಸ್) ಯ ಸಭಾಂಗಣದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು  ದಿನಾಂಕ 11.10.2021 ರಂದು ಆಯೋಜಿಸಲಾಗಿತ್ತು.

ವೀಕ್ಷಿಸಿ

18.

ವಿಶ್ವ ಮಾನಸಿಕ ಆರೋಗ್ಯ ದಿನ 2021 ಆಚರಣೆಯ ಅಂಗವಾಗಿ, ಡಿಮ್ಹಾನ್ಸ್,ಧಾರವಾಡ,ಕರ್ನಾಟಕ ಹೈಕೋರ್ಟ್ ಕಾನೂನು ಸೇವೆಗಳ ಸಮಿತಿ, ಧಾರವಾಡ ಬೆಂಚ್ ಸಹಯೋಗದಲ್ಲಿ ಉಚಿತ ಕಾನೂನು ನೆರವು ಮತ್ತು ಮಾನಸಿಕ ಅಸ್ವಸ್ಥತೆಯ ಹಕ್ಕುಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ನಡೆಸಿತು. ಈ ಕಾರ್ಯಕ್ರಮವು ಪ್ಯಾನ್ ಇಂಡಿಯಾ ಜಾಗೃತಿ ಮತ್ತು ತಲುಪುವ ಕಾರ್ಯಕ್ರಮದ ಭಾಗವಾಗಿದೆ. ಧಾರವಾಡ ಪೀಠದ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಶ್ರೀ.ರಾನ್ ವಾಸುದೇವ್ ಮತ್ತು ಶ್ರೀ.ಜಯಶಂಕರ್, ಹೈಕೋರ್ಟ್ ರಿಜಿಸ್ಟ್ರಾರ್ (ನ್ಯಾಯಾಂಗ), ಧಾರವಾಡ ಬೆಂಚ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು. ಶ್ರೀ.ವಾಸುದೇವ್ ಸರ್, ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್, ಉಚಿತ ಕಾನೂನು ಸೇವೆಗಳ ಕುರಿತು ಮಾತನಾಡಿದರು. ಅವರು ಕರ್ನಾಟಕ ಹೈಕೋರ್ಟ್ ಕಾನೂನು ಸೇವೆಗಳ ಕಾರ್ಯಗಳು ಮತ್ತು ನಿಬಂಧನೆಗಳನ್ನು ಹೈಲೈಟ್ ಮಾಡಿದರು. ಶ್ರೀ.ಜಯಶಂಕರ್ ಹೈಕೋರ್ಟ್ ರಿಜಿಸ್ಟ್ರಾರ್ (ನ್ಯಾಯಾಂಗ) ಮಾನಸಿಕ ಅಸ್ವಸ್ಥತೆಯ ವ್ಯಕ್ತಿಯ ಹಕ್ಕುಗಳ ಕುರಿತು ಮಾತನಾಡಿದರು. ಅವರು ಮಾನಸಿಕ ಆರೋಗ್ಯ ರಕ್ಷಣೆ ಕಾಯ್ದೆ 2017 ರ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದರು. ಮಾನಸಿಕ ಆರೋಗ್ಯ ಜಾಗೃತಿ ಕುರಿತು ಪೋಸ್ಟರ್ ಬಿಡುಗಡೆ ಮಾಡಲಾಯಿತು ಮತ್ತು ಈ ಸಂದರ್ಭವನ್ನು ಗುರುತಿಸಲು ನರ್ಸಿಂಗ್ ಅಧಿಕಾರಿ ಶ್ರೀ.ಶರಣಪ್ಪ ಬರೆದ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

 ವೀಕ್ಷಿಸಿ

19.

ಕರ್ನಾಟಕ ಹೈಕೋರ್ಟ್ ಕಾನೂನು ಸೇವಾ ಸಮಿತಿ ಧಾರವಾಡ, ಡಿಮ್ಹಾನ್ಸ್ ಮತ್ತು ಕೇಂದ್ರ ಕಾರಾಗೃಹ ಧಾರವಾಡದಲ್ಲಿ ಉಚಿತ ಕಾನೂನು ನೆರವು ಮತ್ತು ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು.

ವೀಕ್ಷಿಸಿ

20.

75 ನೇ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ‌ ಪ್ರಾಧಿಕಾರ ಧಾರವಾಡ, ಜಿಲ್ಲಾ ಪಂಚಾಯತ್, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಬೆಂಗಳೂರು ಮಹಿಳಾ ಮತ್ತು  ಮಕ್ಕಳ  ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಧಾರವಾಡ ಮತ್ತು ಡಿಮ್ಹಾನ್ಸ್ ಧಾರವಾಡ ಸಹಯೋಗದೊಂದಿಗೆ ಮಾದಕ ದ್ರವ್ಯ ವ್ಯಸನದ ವಿರುದ್ದ ಅರಿವು ಕಾರ್ಯಕ್ರಮವನ್ನು ಶಿವ ಶಂಕರ ಕಾಲೋನಿ ಸಮುದಾಯ ಭವನ ಹಳೇ ಹುಬ್ಬಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿತ್ತು

ವೀಕ್ಷಿಸಿ

21.

ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಗಳ ಸಂಸ್ಥೆಯಲ್ಲಿ ಸಂಗೀತ ಚಿಕಿತ್ಸೆ ಮತ್ತು ಸಂಶೋಧನಾ ಘಟಕ ಮತ್ತು ಎಸ್ ಜೆ ಎಂ ವಿ ಮಹಾಂತ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ರಾಯಪುರ ಧಾರವಾಡ ಇವರ ಸಹಯೋಗದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು ಮತ್ತು ವಿಶೇಷಚೇತನ ಅಂಧ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು

ವೀಕ್ಷಿಸಿ

22.

ಡಿಮ್ಹಾನ್ಸ್ ಆವರಣದಲ್ಲಿ ರಕ್ತದಾನ ಶಿಬಿರ-ಸ್ವಾಮಿ‌ ವಿವೇಕಾನಂದ ಯೂತ್ ಮೂವಮೆಂಟನ 38ನೇ ಸಂಸ್ಥಾಪನಾ ದಿನಾಚರಣೆ ಮತ್ತು ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಡಿಮ್ಹಾನ್ಸ್ ಸಂಸ್ಥೆ ಧಾರವಾಡಲ್ಲಿ ಡಿಸೆಂಬರ್ 1 ರಂದು ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ರಕ್ತದಾನ ಶಿಬಿರವನ್ನು ಧಾರವಾಡ ಜಿಲ್ಲಾ ಅಧಿಕಾರಿಗಳಾದ ಶ್ರೀ ನಿತೇಶ ಪಾಟೀಲ ರವರು ಉದ್ಘಾಟಿಸಿದರು.  ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಶ್ರೀ ನಿತೇಶ ಪಾಟಿಲ ರವರು ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ಅತ್ಯಂತ ಒಳ್ಳೆಯ ಕೆಲಸವೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಕ್ತದಾನ ಶಿಬಿರದಲ್ಲಿ ಸಂಗ್ರಹಿಸಿದ 113  ಯುನಿಟ್ ರಕ್ತ ದಾನವನ್ನು  ಹುಬ್ಬಳ್ಳಿಯ  ಕಿಮ್ಸ್ ರಕ್ತದಾನ ಕೇಂದ್ರಕ್ಕೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಡಿಮ್ಹಾನ್ಸ್ ಸಂಸ್ಥೆಯ ಮನೋರೋಗ ಪ್ರಾಧ್ಯಾಪಕರಾದ ಡಾ.ರಾಮಪ್ರಸಾದ ಕೆ.ಎಸ್, ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್ ನ ಪ್ರಾದೇಶಿಕ ಮುಖ್ಯಸ್ಥ ಶ್ರೀ ಜಯಂತ್ ಕೆ.ಎಸ್, ಡಾ.ಮೋಹನ್ ತಂಬದ, ಕವಿವಿ ಎನ್.ಎಸ್.ಎಸ್.ಸಂಯೋಜನಾಧಿಕಾರಿ ಡಾ.ಎಂ.ಬಿ.ದಳಪತಿ, ಡಿಮ್ಹಾನ್ಸ್ ವೈದ್ಯಕೀಯ ಅಧಿಕ್ಷಕರಾದ ಡಾ.ಶ್ರೀನಿವಾಸ ಕೊಸಗಿ, ಸ್ವಾಮಿ‌ ವಿವೇಕಾನಂದ ಯೂತ್ ಮೂವಮೆಂಟ್ ಸಂಸ್ಥೆಯ ಸಿಬ್ಬಂದಿಗಳು, ವಿವಿಧ ಕಾಲೇಜು ಶಿಕ್ಷಕರು, ವಿದ್ಯಾರ್ಥಿಗಳು, ಡಿಮ್ಹಾನ್ಸ್ ಸಂಸ್ಥೆಯ ಮನೋವೈದ್ಯಕೀಯ ಸಮಾಜಕಾರ್ಯಕರ್ತರು ಮತ್ತು ಸಮುದಾಯ ಮಾನಸಿಕ ಆರೋಗ್ಯ ಸೇವೆಗಳ ಸಂಯೋಜಕರಾದ ಶ್ರೀ ಅಶೋಕ ಕೋರಿ ಉಪಸ್ಥಿತರಿದ್ದರು.

ವೀಕ್ಷಿಸಿ

23.

ಅಂಗವಿಕಲರ ಹಕ್ಕುಗಳು ಮತ್ತು ಯೋಗಕ್ಷೇಮವನ್ನು ಉತ್ತೇಜಿಸಲು ಪ್ರತಿ ವರ್ಷ ಡಿಸೆಂಬರ್ 3 ರಂದು ವಿಶ್ವಾದ್ಯಂತ ಅಂಗವಿಕಲರ ಅಂತರರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಕ್ಲಿನಿಕಲ್ ಸೈಕಾಲಜಿ ವಿಭಾಗದ ವತಿಯಿಂದ 23-12-2021 ರಂದು ಧಾರವಾಡ ಗ್ರಾಮೀಣ ಬ್ಲಾಕ್ ಎಜುಕೇಶನಲ್ ಆಫೀಸ್ ಸಹಯೋಗದಲ್ಲಿ ಬೌದ್ಧಿಕ ವಿಕಲಾಂಗ ಮಕ್ಕಳ ಪೋಷಕರಿಗಾಗಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ವೀಕ್ಷಿಸಿ

24.

73 ನೇಯ ಗಣರಾಜ್ಯೋತ್ಸವದ ಅಂಗವಾಗಿ ಡಿಮ್ಹಾನ್ಸ್ ಸಂಸ್ಥೆಯಲ್ಲಿ ಮಾನ್ಯ ನಿರ್ದೇಶಕರಾದ ಡಾ|| ಮಹೇಶ ದೇಸಾಯಿರವರು  ದ್ವಜಾರೋಹಣ ನೆರವೇರಿಸಿದರು

 ವೀಕ್ಷಿಸಿ

25.

ವಿಶ್ವ ಸಾಮಾಜಿಕ ಕಾರ್ಯ ದಿನ -2022 ರ ಸಂದರ್ಭದಲ್ಲಿ, DIMHANS ನ OPD ಯಲ್ಲಿ ಹೊರರೋಗಿಗಳಿಗಾಗಿ ಮಾನಸಿಕ ಆರೋಗ್ಯ ಜಾಗೃತಿ ದಿನದ ಕಾರ್ಯಕ್ರಮವನ್ನು ನಡೆಸಲಾಯಿತು. ಡಾ.ಎಸ್.ಆರ್.ಕೌಜಲಾಯಿ ಸರ್, ಶ್ರೀ.ಬಿ.ಜಿ.ಅನಂತರಾಮು, ಶ್ರೀ.ಆರ್.ಎಂ.ತಿಮ್ಮಾಪುರ್, ಶ್ರೀ.ಅಶೋಕ್ ಕೋರಿ ಮತ್ತು ಶ್ರೀ.ಓಬಾ ನಾಯ್ಕ್ ಪಿ ಅವರು ಮಾನಸಿಕ ಅಸ್ವಸ್ಥತೆಗಳು, ಕಾರಣಗಳು, ಚಿಕಿತ್ಸೆ ಮತ್ತು ಪುನರ್ವಸತಿ ಸೌಲಭ್ಯಗಳ ಕುರಿತು ಮಾತನಾಡಿದರು. ಶ್ರೀಮತಿ ಶ್ರೀದೇವಿ ಬಿರಾದಾರ್ ವಂದಿಸಿದರು. ಕಾರ್ಯಕ್ರಮದ ನಂತರ DIMHANS ಕ್ಯಾಂಪಸ್‌ನಲ್ಲಿ M.Phil ವಿದ್ಯಾರ್ಥಿಗಳು ಮಾಡಿದ ಗಿಡ ನೆಡಲಾಯಿತು. ಈ ಸಂದರ್ಭದಲ್ಲಿ ನಾನು ನಿಮಗೆಲ್ಲರಿಗೂ ವಿಶ್ವ ಸಮಾಜಕಾರ್ಯ ದಿನದ ಶುಭಾಶಯಗಳನ್ನು ಕೋರುತ್ತೇನೆ

ವೀಕ್ಷಿಸಿ

26.

International nurses day celebration at DIMHANS Dharwad 2022-23

ವೀಕ್ಷಿಸಿ

27.

ಡಿಮ್ಹಾನ್ಸ್ ಸಂಸ್ಥೆಯಲ್ಲಿ ದೀರ್ಘಾವಧಿ ನೋವು ಚಿಕಿತ್ಸೆ ಕೇಂದ್ರ ಉದ್ಘಾಟನೆ

ವೀಕ್ಷಿಸಿ

28.

ಧಾರವಾಡದ ಡಿಮ್ಹಾನ್ಸ್ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ದಿನದಂದು ಖ್ಯಾತ ಮನೋವೈದ್ಯರು ಹಾಗೂ  ನಿಮ್ಹಾನ್ಸ್ ಸಂಸ್ಥೆಯ ನಿರ್ದೇಶಕರಾದ ಡಾ.ಪ್ರತಿಮಾ ಮೂರ್ತಿ ಮೇಡಂ ಮತ್ತು  ಧಾರವಾಡದ ಡಿಮ್ಹಾನ್ಸ್ ನಿರ್ದೇಶಕರಾದ ಡಾ.ಮಹೇಶ ದೇಸಾಯಿ ಅವರು ಡಿಮ್ಹಾನ್ಸ್ ಸಂಸ್ಥೆಯ ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರನ್ನು  ಹಾಕುವುದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿದರು. ಡಿಮ್ಹಾನ್ಸ್‌ನ ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗದಿಂದ ಈ ಕಾರ್ಯಕ್ರಮವನ್ನು ಜೂನ್ 5, 2022 ರಂದು ಆಯೋಜಿಸಲಾಗಿತ್ತು.  ಡಿಮ್ಹಾನ್ಸ್ ಸಂಸ್ಥೆಯ ವಿವಿಧ ವಿಭಾಗಗಳ ಸಿಬ್ಬಂದಿಗಳು ಭಾಗವಹಿಸಿದ್ದರು.

ವೀಕ್ಷಿಸಿ

29.

ಅಂತಾರಾಷ್ಟ್ರೀಯ ಮಾದಕ ವಸ್ತು ವಿರೊಧಿ ದಿನ 2022

ವೀಕ್ಷಿಸಿ

30.

ವ್ಯಸನ ಮುಕ್ತ ಸಕಾರಾತ್ಮಕ ಮಾನಸಿಕ ಆರೋಗ್ಯ  ಉಪನ್ಯಾಸ

ವೀಕ್ಷಿಸಿ

 

 

ಇತ್ತೀಚಿನ ನವೀಕರಣ​ : 11-07-2022 10:00 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ-ಧಾರವಾಡ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080