ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್) -ಧಾರವಾಡ

ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ

ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಪ್ರಯುಕ್ತ “ಜಾಥಾ” ಮತ್ತು ಅರಿವು ಕಾರ್ಯಕ್ರಮ-2023

Home

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಧಾರವಾಡ, ಮನೋರೋಗ ವಿಭಾಗ ಧಾರವಾಡ ಹಾಗೂ ಡಿಮ್ಹಾನ್ಸ್ ಸಂಸ್ಥೆ, ಧಾರವಾಡ ಇವರ ಸಹಯೋಗದಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಪ್ರಯುಕ್ತ “ಜಾಥಾ” ಕಾರ್ಯಕ್ರಮವನ್ನು ದಿನಾಂಕ 15.09.2023 ರಂದು ಹಮ್ಮಿಕೊಳ್ಳಲಾಗಿತ್ತು. ಈ ಜಾಥಾ ಕಾರ್ಯಕ್ರಮವು ಡಿಮ್ಹಾನ್ಸ್ ಸಂಸ್ಥೆಯ ಆವರಣದಲ್ಲಿ ಗೌರವಾನ್ವಿತ ಶ್ರೀ ಪರುಶುರಾಮ ಎಫ್.ದೊಡ್ಡಮನಿ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಧಾರವಾಡ ಗೌರವಾನ್ವಿತ ಡಿ.ಆರ್.ರೇಣಕೆ, ಅಧ್ಯಕ್ಷರು, ಮಾನಸಿಕ ಆರೋಗ್ಯ ವಿಮರ್ಶಾ ಮಂಡಳಿ, ಬೆಳಗಾವಿ ಹಾಗೂ ಕಲಬುರಗಿ ವಿಭಾಗ ಮತ್ತು ನಿವೃತ್ತ ಜಿಲ್ಲಾ ನ್ಯಾಯಾಧೀಶರು ಧಾರವಾಡ ಮತ್ತು ಡಾ.ಪಾಟೀಲ ಶಶಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಧಾರವಾಡ ಇವರುಗಳಿಂದ ಜಾಥಾಕ್ಕೆ ಹಸಿರು ಚಾಲನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.

ಈ ಜಾಥಾ ವು ಡಿಮ್ಹಾನ್ಸ್ ಸಂಸ್ಥೆಯ ಆವರಣದಿಂದ ಪ್ರಾರಂಭವಾಗಿ ಪ್ರೆಸೆಂಟೇಶನ್ ಶಾಲೆ ಹಿಂಭಾಗದ ರಸ್ತೆಯ ಮೂಲಕ, ಹಳೆ ಎಸ್.ಪಿ ವೃತ್ತಕ್ಕೆ ತಲುಪಿತು. ಇಲ್ಲಿ ನಸಿಂಗ್ ವಿದ್ಯಾರ್ಥಿಗಳು, ಸಮಾಜಕಾರ್ಯ ಪ್ರಶೀಕ್ಷಾಣಾರ್ಥಿಗಳು ಹಾಗೂ ಇತರ ವಿಭಾಗದ ಸಿಬ್ಬಂದಿಗಳು ಮಾನವ ಸರಪಳಿಯನ್ನು ನಿರ್ಮಿಸಿ, ಆತ್ಮಹತ್ಯೆ ತಡೆಗಟ್ಟುವ ಕುರಿತಾದ ಘೋಷಣೆಗಳನ್ನು ಹೇಳಿದರು. ತದನಂತರ ಈ ಜಾಥಾವು ಡಿಮ್ಹಾನ್ಸ್ ಸಂಸ್ಥೆಗೆ ತಲುಪಿತು. ತದನಂತರ ಮಾತನಾಡಿದ ಡಿಮ್ಹಾನ್ಸ್ ಸಂಸ್ಥೆಯ ನಿದೇಶಕರಾದ ಡಾ.ಮಹೇಶ ದೇಸಾಯಿ ರವರು ಮಾತನಾಡಿ ಆತ್ಮಹತ್ಯೆ ತಡೆಗಟ್ಟಲು ಎಲ್ಲರೂ ಕೂಡ ಒಗ್ಗೂಡಿ ಕೆಲಸಮಾಡಬೇಕಾಗಿದೆ. ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಟೆಲಿಮಾನಸ್ ಸಹಾಯವಾಣಿಯ ಸಹಾಯ ಪಡೆದುಕೊಂಡು ಈ ಆತ್ಮಹತ್ಯೆಯ ವಿಚಾರದಿಂದ ಹೊರಬಂದು ಉತ್ತಮ ಜೀವನ ನಡೆಸಬಹುದಾಗಿದ ಎಂದರು. ಪ್ರತಿ ವರ್ಷ ಆಯೋಜಿಸುವ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವೆಂದು ಹೇಳುತ್ತಾ, ಮಾನಸಿಕ ಕಾಯಿಲೆಗಳ ಸಮಸ್ಯೆಗೆಳಿಗೆ ಮನೋವೈದ್ಯರನ್ನು ಸಂಪರ್ಕಿಸಲು ಹಿಂಜರಿಯಬಾರದೆಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಡಾ.ಶಿಶಧರ ಬಿ.ಕಳಸೂರ ಮಠ, ಜಿಲ್ಲಾ ಕುಷ್ಠರೋಗ ನಿರ್ಮೂನಲಾಧಿಕಾರಿಗಳು, ಜಿಲ್ಲಾ ಕಾರ್ಯಕ್ರಮ ಅನುಷ್ಠಾಧಿಕಾರಿಗಳು, ಮಾನಸಿಕ ಆರೋಗ್ಯ ವಿಭಾಗ, ಧಾರವಾಡ, ಡಾ..ತನುಜಾ ಕೆ.ಎನ್. ತಾಲೂಕು ಆರೋಗ್ಯಧಿಕಾರಿಗಳು, ಧಾರವಾಡ,  ಡಾ.ಅಯ್ಯನಗೌಡ ಪಾಟೀಲ, ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿಗಳು, ಧಾರವಾಡ ಹಾಗೂ ಇತರ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಡಿಮ್ಹಾನ್ಸ್ ಸಂಸ್ಥೆಯ ಮನೋರೋಗ ವಿಭಾಗ ಮುಖ್ಯಸ್ಥರಾದ ಡಾ.ರಾಘವೇಂದ್ರ ನಾಯಕ್, ಸಹ ಪ್ರಾಧ್ಯಾಪಕರಾದ ಡಾ.ರಂಗನಾಥ ಕುಲಕರ್ಣಿ,  ಸಹ ಪ್ರಾಧ್ಯಾಪಕರಾದ ಡಾ.ತೇಜಸ್ವಿ ಟಿ.ಪಿ,  ಟೆಲಿ ಮಾನಸ್ ಹಿರಿಯ ಸಂದರ್ಶಕ ಮನೋವೈದ್ಯರಾದ ಡಾ.ಸುಧೀಂದ್ರ ಹುದ್ದಾರ ಹಾಗೂ ಸೈಕಿಯಾಟ್ರಿಕ್ ನಸಿಂಗ್ ಉಪನ್ಯಾಸಕರಾದ ಡಾ.ಸುಶೀಲಕುಮಾರ ರೋಣದ್, ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗದ ಸಹಪ್ರಾಧ್ಯಾಪಕರಾದ ಶ್ರೀ ಅನಂತರಾಮು ಬಿ.ಜಿ, ಮನೋವೈದ್ಯಕೀಯ ಸಮಾಜಕಾರ್ಯಕರ್ತರಾದ ಅಶೋಕ ಕೋರಿ, ಓಬಾ ನಾಯ್ಕ ಪಿ, ಪ್ರಶಾಂತ ಪಾಟೀಲ್, ಶ್ರೀಮತಿ ಶ್ರೀದೇವಿ ಬಿರಾದಾರ, ಆರ್.ಎಮ್.ತಿಮ್ಮಾಪೂರ, ಸೈಕಿಯಾಟ್ರಿಕ್ ನಸಿಂಗ್ ವಿಭಾಗದ ಪ್ರಶಾಂತ ಬೇವೂರು, ಟಲಿಮಾನಸ್ ತಂಡದವರು ಹಾಗೂ ಇತರ ವಿಭಾಗದ ಸಿಬ್ಬಂದಿಗಳು, ಸೈಕಿಯಾಟ್ರಿಕ್ ನಸಿಂಗ್ ವಿಭಾಗದ ನರ್ಸಿಂಗ್ ವಿದ್ಯಾರ್ಥಿಗಳು, ಸಮಾಜಕಾರ್ಯ ವಿದ್ಯಾರ್ಥಿಗಳು ಹಾಗೂ ಎಸ್.ವಿ.ವಾಯ.ಎಮ್ ಸಂಸ್ಥೆಯ ಇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

×
ABOUT DULT ORGANISATIONAL STRUCTURE PROJECTS