ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್) -ಧಾರವಾಡ

ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ

ಪರಿಸರದ ಸಂರಕ್ಷಣೆವೇ ನಮ್ಮ ಆರೋಗ್ಯ

Home

ತಂಬಾಕು ಮತ್ತು ಧೂಮಪಾನ ಉಪಯೋಗಿಸುತ್ತಿರುವ ಜನರೇ, ಕ್ಷಣಿಕ ಸುಖಕ್ಕಾಗಿ, ಮನಸ್ಸಿನ ಉಲ್ಲಾಸ ಮತ್ತು ಸಂತೋಷಕ್ಕಾಗಿ ಸೇವನೆ ಮಾಡುತ್ತಿರಿ, ಇದು ದೇಹಕ್ಕೆ ಹಾನಿಕಾರ ಹಾಗೂ ಸಮಾಜಿಕ ಸಮಸ್ಯೆ ಎಂಬುದು ಗೊತ್ತಿದಿದ್ದು, ಇಂದಿನ ಯುವಜನತೆ ಇದರ ದಾಸನಕ್ಕೆ ಒಳಗಾಗಿ ತಮ್ಮ ಜೀವನವನ್ನು ತಾವೇ ಸುಟ್ಟಿಕೊಳ್ಳುತ್ತಾರೆ. ಹಿಗಾಗಿ ಜನರ ಮನಸ್ಸಿನಲ್ಲಿರುವ ಕೆಟ್ಟ ಅಭಾಸ್ಯಗಳ ಆಲೋಚಬೆಗಳು ದೂರವಾಗುವಂತೆ ಮಾಡಬೇಕು. ಈಗಾಗಲೇ ಇಂತಹ ಸಾಕಷ್ಟು ನಿದರ್ಶನಗಳು ನಮ್ಮ ಕಣ್ಣ ಮುಂದೆಯೇ ನೆಡದುಹೋಗಿವೆ. ಜನರು ಈಗಲಾದರು ಎಚ್ಚೆತ್ತುಕೊಂಡು ಇಂತಹ ಹವ್ಯಾಸಗಳಿಂದ ದೂರವುಳಿವುದು ಒಳ್ಳೆಯದು. ವಿಶ್ವದಲ್ಲಿ ನಮ್ಮ ಭಾರತ ಧೂಮಪಾನ ಉತ್ಪನ್ನಗಳನ್ನು ತಯಾರು ಮಾಡುವಲ್ಲಿ ೩ನೇ ದೇಶವಾಗಿದೆ. ಧೂಮಪಾನ ತಂಬಾಕು ಚಟ ಹಾಗೂ ಹೊಗೆಸೊಪ್ಪಿನ ಸೇವನೆಯ ಅಭ್ಯಾಸವನ್ನು ಮಾಡಿಕೊಂಡಿರುವ ಜನಸಂಖ್ಯೆ ವಿಶ್ವಮಟ್ಟದಲ್ಲಿ ಭಾರತ ೨ನೇ ಸ್ಥಾನ ಇದೆ, ಇದು ತೆಲೆತಗ್ಗಿಸುವ ವಿಷಯ.  ತಂಬಾಕು ಮತ್ತು ಧೂಮಪಾನ ಸೇವನೆಯಿಂದ ವೈಯಕ್ತಿಕ ಹಾಗೂ ಸಮಾಜಿಕ ಸ್ವಾಸ್ಥೆ ಹಾಳಾಗುತ್ತದೆ ಇದನ್ನು ತಡೆಗಟ್ಟಲು ವಿಶ್ವ ಆರೋಗ್ಯ ಸಂಸ್ಥೆಯು ಮೇ ೩೧ ರಂದು ಪ್ರತಿ ವರ್ಷ ವಿಶ್ವ ತಂಬಾಕು ಮುಕ್ತ (ರಹಿತ) ದಿನಾಚಾರನೆಯನ್ನಾಗಿ ಆಚರಿಸಲಾಗುತ್ತದೆ. ತಂಬಾಕು ಸೇವನೆ ದೇಹಕ್ಕೆ ಹಾನಿ ಎಂದು ಪ್ರತಿ ಬಾರಿ ಎಚ್ಚರಿಸಿದರೂ, ತಂಬಾಕು ಮತ್ತು ಧೂಮಪಾನ (ಸ್ಮೋಕಿಂಗ್) ಸೇವನೆ ಮಾಡುವವರ ಸಂಖ್ಯೆ ದಿನೇ ದಿನೇ  ಹೆಚ್ಚುತ್ತಲ್ಲೇ ಇದೆ. ತಂಬಾಕು ಮತ್ತು ಧೂಮಪಾನ ಆರೋಗ್ಯಕ್ಕೆ ಹಾನಿಕಾರಿ ಎಂದು ಸಿಗರೇಟ ಪ್ಯಾಕೇಟ್ ಮೇಲೆ ಇದ್ದರು ಸಹ ಸೇವೆನ ಮಾಡುತಿದ್ದಾರೆ, ಇದರಿಂದ ಆರೋಗ್ಯದ ಮೇಲೆ ಆಗುತ್ತಿರುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ದಿನೇ ದಿನೇ ಜಾಗೃತಿ ಕಾರ್ಯಕ್ರಮಗಳು ನೆಡಯುತ್ತಲೇ ಇವೆ, ಆದರೂ ಅವುಗಳ ದಾಸರಾಗುತ್ತುವುದು ನಿಜಕ್ಕು ಅಘಾತಕಾರಿ. ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ಜಗತ್ತಿನಲ್ಲಿ ಶೇ.೪೦ ಪ್ರತಿಶತ ಜನರು ಧೂಮಪಾನ ಮಾಡುತ್ತಾರೆ. ಇದರಲ್ಲಿ ಶೇ ೯ ರಷ್ಟು ಮಹಿಳೆಯರಿದ್ದಾರೆ. ತಂಬಾಕಿನಿಂದ ಪ್ರತಿ ೬ ಸೆಲೆಂಡೆಗೆ ಒಬ್ಬ ವ್ಯಕ್ತಿ ಸಾವಿಗೀಡಾಗುತ್ತಿದ್ದಾರೆ. ೧೦ಲಕ್ಷಕ್ಕೂ ಹೆಚ್ಚು ಜನರು ತಂಬಾಕು ಮತ್ತು ಅದರ ಉತ್ಪನ್ನದಿಂದ ಉಂಟಾದ ರೋಗದಿಂದ ಸಾವನ್ನಪುಪುತ್ತಿದ್ದಾರೆ.   ಈ ವಿಷಯದ ಮೇಲೆ ಪ್ರತಿ ವರ್ಷ ವಿಶ್ವ ಆರೋಗ್ಯ ಸಂಸ್ಥೆಯು, ವಿಶ್ವ ತಂಬಾಕು ರಹಿತ ದಿನದಂದು ಘೋಷಣೆ ನೀಡುತ್ತಲೇಬಂದಿದೆ. ೨೦೨೨ ರ ವರ್ಷದ ಘೋಷಣೆ ಅಂದರೆ “ಪರಿಸರವನ್ನು ಸಂರಕ್ಷಿಸಿ”  ತಂಬಾಕು/ಧೂಮಪಾನ ತ್ಯಜಿಸಿ “ಪರಿಸರವನ್ನು ಸಂರಕ್ಷಿಸಿ” ನಮ್ಮ ಆರೋಗ್ಯವನ್ನು ಸಂರಕ್ಷಸಿಸೋನ.

ತಂಬಾಕು/ಧೂಮಪಾನ ತಡೆಗಟ್ಟಲು, ವಿಶ್ವ ಆರೋಗ್ಯ ಸಂಸ್ಥೆಯು ಮೊದಲಿಗೆ ೧೯೮೭ ರಲ್ಲಿ ತಂಬಾಕು/ಧೂಮಪಾನ ಉಪಯೋಗಿಸಬಾರುದು ನಿರ್ದರಿಸಿತ್ತು. ನಂತರ ಇದನ್ನು ೧೯೮೯ ರಿಂದ ವಿಶ್ವ ತಂಬಾಕು ಮುಕ್ತ್ ದಿನವನ್ನಾಗಿ ಆಚರಿಸುತ್ತಾ ಬಂದಿದೆ. ‘ಆರೋಗ್ಯಕ್ಕೆ ಮಾರಕವಾಗಿರುವ ತಂಬಾಕು, ಧೂಮಪಾನ (ಬೀಡಿ, ಸಿಗರೇಟು) ಸೇವೆನೆಗೆ ಯುವ ಸಮುದಾಯ, ವಯಸ್ಕರು ಮತ್ತು ಮಹಿಳೆಯರು ಬಲಿಯಾಗುತ್ತಿರುವುದು ಸಮಾಜ ಕಳವಳಿಕಾರಿ ಸಂಗತಿರ ಇಂದಿನ ದಿನಗಳಲ್ಲಿ ಬಹುತೇಕ ಜನರು ಪಾಸ್ಟ್ ಫುಡ್, ಜಂಕ್ ಫುಡ್ ಸೇವನೆ ಮಾಡುತ್ತಿದ್ದಾರೆ, ನಾವು ಸೇವಿಸುತ್ತಿರು ದಿನನಿತ್ಯದ ಆಹಾರದಲ್ಲಿ ಸಾಕಷ್ಟು ಕಲಬೆರಿಗೆ ಅಂಶಗಳು ಇರುತ್ತದೆ. ಇಂತಹ ಸಂದರ್ಭದಲ್ಲಿ ತಂಬಾಕು, ಗುಟಕ, ಧೂಮಪಾನ ಸೇವಿಸುದರಿಂದ ಆರೋಗ್ಯದ ಮೇಲೆ ತೀವ್ರತೆರನಾದ ಪರಿಣಾಮ ಉಂಟು ಮಾಡುತ್ತದೆ.  ಇವುಗಳನ್ನು ನಷೇಧಿಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ತಂಬಾಕು ಸೇವನೆಯ ನಿರ್ಮೂಲನೆ ಮಾಡುವುದರ ಮೂಲಕ ಆರೋಗ್ಯವನ್ನು ಅಭಿವೃದ್ದಿಯುತ್ತ ಸಾಗಿಸುವುದು ವಿಶ್ವ ಆರೋಗ್ಯ ಸಂಸ್ಥೆಯ ಉದ್ದೇಶವಾಗಿರುತ್ತದೆ.

ತಂಬಾಕು/ಧೂಮಪಾನದ ಕಾರಣಗಳು:

ನೀವು ತೆಗೆದುಕೋಳ್ಳುತ್ತಿರುವ ತಂಬಾಕು/ಧೂಮಪಾನದಲ್ಲಿ ಕಾರ್ಸಿನೋಜನ್ ಎಂಬ ಮಾರಕ ಅಂಶಗಳು ಅಡಗಿರುತ್ತದೆ. ಇದು ನಿಮ್ಮ ರಕ್ತದಲ್ಲಿ ಸೇರಿಕೊಂಡು ಅತ್ಯಂತ ಕೆಟ್ಟ ರಾಸಾಯನಿಕ ದ್ರವ, ನಿಮ್ಮ ಇಡೀ ದೇಹದ ತುಂಬಾ ಹರಡುತ್ತವೆ. ಈ ರಾಸಾಯನಿಕ ಅಂಶಗಳು ಡಿಎನ್‌ಎ ಗಳಿಗೆ ತೊಂದರೆ ಹಾಗೂ ದೇಹದ ಬೆಳವಣಿಗೆ ಆಗದಂತೆ ಮತ್ತು ಕ್ಯಾನ್ಸರ್ ಉಂಟುಮಾಡುತ್ತದೆ. ದೇಹದ ಅಂಗಾಗಗಳಿಗೆ ಹಾನಿ ಮಾಡುತ್ತದೆ. ಜೊತೆಗೆ ಬಾಯಿ, ಗಂಟಲು ಮೆದಳು, ಶ್ವಾಸಕೋಶ, ದ್ವನಿಪೆಟ್ಟಿಗೆ, ಮೂತ್ರಪಿಂಡಗಳು  ಮತ್ತು ಸ್ತನಗಳಿಗೂ ಕೂಡ ಹಾನಿ ಉಂಟಾಗುತ್ತದೆ. ಹಾಗೂ ದೀರ್ಘಕಾಲದ ಕಾಯಿಲೆಗಳು ಹೃದಯಕ್ಕೆ ಸಂಬಂಧಪಟ್ಟ  ಕಾಯಿಲೆಗಳು, ಪಾರ್ಶ್ವವಾಯು ಸಮಸ್ಯೆ ಕುರುಡುತನ, ಹಲ್ಲು ಮತ್ತು ವಸಡುಗಳ ಸಮಸ್ಯೆಗಳಿಗು ಕೂಡ ಕಾರಣವಾಗುತ್ತದೆ. ತಂಬಾಕು/ಧೂಮಪಾನದ ಸೇವನೆ ಮಾಡಲು ಕಾರಣಗಳೆಂದರೆ, ಒಬ್ಬರನ್ನು ನೋಡಿ ಇನ್ನೊಬ್ಬರು ಮಜಾ ಮಾಡುವುದಕ್ಕಾಗಿ ಶುರುಮಾಡುತ್ತಾರೆ, ಚಳಿಗಾಲ ತಂಡಿ ಸಲುವಾಗಿ, ಮದ್ಯಪಾನದ ಜೊತೆಗೆ ಧೂಮಪಾನ ಸೇವನೆ, ಕಾಲೇಜು ಹುಡುಗರು ರಾತ್ರಿ ಹೊತ್ತು ಹೆಚ್ಚು ಅಭ್ಯಾಸ ಮಾಡುವ ಸಲುವಾಗಿ, ರೈತಾಪಿ ಜನರು ತಮ್ಮ ಮನಸ್ಸಿಗೆ ಉಲ್ಲಾಸ ತೆಗೆದುಕೊಳ್ಳಲು ತಂಬಾಕು/ಧೂಮಪಾನ ಸೇವನೆಗೆ ತುತ್ತಾಗುತ್ತಾರೆ. ಇನ್ನೂ ಕೆಲವರು ಸ್ನೇಹಿತರ ಒತ್ತಾಯಕ್ಕೆ, ಸುತ್ತಮುತ್ತಲಿನ ಪರಿಸರ, ನೋಡಿ ಅದಕ್ಕೆ ಆಕರ್ಷತರಾಗಿ ಬಲಿಯಾಗುತ್ತಾರೆ. ಕೆಲವರು ಮನಸ್ಸಿನ ಒತ್ತಡ ನೀಗಿಸುವ ಸಲುವಾಗಿ, ಹಾಗೂ ಇತರ ಘಟನೆಗಳ ಮೂಲಕ ಅಂದರೆ ಹಲ್ಲಿನ ನೋವು ತಡೆ ಹಿಡಿಯಲು, ಅಸ್ತಮಾ/ಧಮ್ಮು ನಿವಾರಿಸಲು ತಂಬಾಕು ಸೇವನೆ ಮಾಡುತ್ತಾರೆ. ಇದನ್ನು ಒಂದು ಸಲ ಪ್ರಾರಂಭಿಸಿದ ಮೇಲೆ ಅಗಾಗ ಸೇವನೆ ಮಾಡುಬೇಕು ಎಂದು ಮನಸ್ಸಿಗೆ ಅನಿಸುತ್ತದೆ, ಅದೇ ಮುಂದೆ ಚಟವಾಗಿ ಪರಿಣಿಮಿಸುತ್ತದೆ. ಅದಕ್ಕೆ ಆಗಾಗ ಸೇವನೆ ಮಾಡಿ ಮನುಷ್ಯ ಚಟಕ್ಕೆ ಒಳಗಾಗುತ್ತಾನೆ. ಒಂದು ಸಲ ಚಟಕ್ಕೆ ತುತ್ತಾದ ಮೇಲೆ ತಂಬಾಕು/ಧೂಮಪಾನ ದೇಹದ ಅಂಗಕ್ಕೆ ಹೊಂದಾಣಿಕೆವಾಗುತ್ತದೆ. ಆವಾಗ ಅದನ್ನು ಬಿಡಲು ಆಗುತ್ತಿಲ್ಲಾ, ಅದಕ್ಕೆ ಬಂದಿಯಾಗಿ ಬಿಡುತ್ತಾರೆ. ಏಕೆಂದರ ತಂಬಾಕಿನಲ್ಲಿರುವಂಥ ನಿಕೋಟಿನ್ ಅಂಶ ಅದು ಅವಲಂಭಿಸುವಂತೆ ಮಾಡುತ್ತಿದ್ದ ಇದರಿಂದ ಸಾಮಾಜಿಕವಾಗಿ, ದೈಹಿಕವಾಗಿ ವರ್ತನಾತ್ಮಕವಾಗಿ ಮತ್ತು ಮಾನಸಿಕವಾಗಿ, ಸಮಸ್ಯೆಗಳನ್ನು ಎದುರಿಸುತ್ತಾರೆ ಅಂದರೆ ಶರೀರದಲ್ಲಿ ಧೂಮಪಾನದ ವಿಷಪೂರಿತ ರಾಸಾಯಾನಿ ವಸ್ತುಗಳು ದೇಹದ ಮೇಲೆ ಮಾರಣಾಂತಿಕ ರೋಗದ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಅಂದರೆ ಟಿ. ಬಿ., ಕ್ಯಾನ್ಸರ್, ಅಸ್ತಮಾ, ಮೇದುಳು ಗಡ್ಡೆ, ಹೃದಯ ಕಾಯಿಲೆ,  ಕುಪ್ಪಸ ಕಾಯಿಲೆ, ಮತ್ತು ಯಕೃತಿ ಕಾಯಿಲೆಗೆ, ತುತ್ತಾಗಿ ದೇಹ ಕ್ಷೀಣಿಸುತ್ತದೆ ಮತ್ತು ಅಶಕ್ತತೆಯಾಗುತ್ತಾರೆ. ನಂತರ ಮಾನಸಿಕ ಕಾಯಿಲೆ ಲಕ್ಷಣಗಳು ಕಾಣಿಸಿಕೊಳ್ಳುವುದು, ನಿದ್ರೆಸದೇ ಇರುವುದು. ಮತ್ತು ಮನಸ್ಸಿನ ಉತ್ಸಾಹ ಕಳೆದುಕೊಳ್ಳುವುದು, ಒಂಟಿಯಾಗಿ ಕುಳಿತುಕೊಳ್ಳುವುದು. ಹೀಗೆ ಮಾಡುತ್ತಿದ್ದವರಿಗೆ ಚಿಕಿತ್ಸೆ ಒಂದೇ ಪರಿಹಾರ, ಔಷದೋಪಚಾರವೇ ತಂಬಾಕು/ಧೂಮಪಾನಕ್ಕೆ ಮುಖ್ಯ ಚಿಕಿತ್ಸಾ ವಿಧಾನ, ನಂತರ ಮನೋವೈದ್ಯಕೀಯ ಸಮಾಜಕಾರ್ಯಕರ್ತರು ಮತ್ತು ಮನೋಚಿಕಿತ್ಸಕರು ಇವರ ಸಹಕಾರದಿಂದ ಆಪ್ತ ಸಮಾಲೋಚನೆ, ಹಾಗೂ ವ್ಯಕ್ತಿಗಳ ವರ್ತನೆಗಳನ್ನು ಬದಲಾವಣೆಗಳಿಗೆ, ಹೊಸ ಜೀವನ ಕೌಶಲ್ಯಗಳ ಬಗ್ಗೆ ತರಬೇತಿ ನೀಡಲಾಗುವುದು, ಮತ್ತು ಅವರ ಜವಾಬ್ದಾರಿಗಳ ವೃದ್ದಿಗೊಳಿಸಲು,  ಅವರ ಪಾತ್ರವೇನೆಂಬುದರ ಕುರಿತು ಅವರಿಗೆ ಅರಿವು ಮೂಡಿಸಲಾಗುವುದು. ಇದರಿಂದ ತಂಬಾಕು/ಧೂಮಪಾನದಿಂದ ಮುಕ್ತಿ ಹೊಂದಿ ಹೊಸ ಜೀವನ ಸಾಗಿಸಲು ಅನುಕೂಲವಾಗುವುದು. ಚಿಕಿತ್ಸೆ ಹಾಗೂ ಔಷಧೋಪಚಾರಕ್ಕಾಗಿ  ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ, (ಡಿಮ್ಹಾನ್ಸ್), ಧಾರವಾಡ. ಹಾಗೂ ಮುಂದಿನ ಔಷದೋಪಚಾರದ ಅನುಸರಣೆಗಾಗಿ ಕರ್ನಾಟಕದ ಎಲ್ಲಾ ತಾಲೂಕ, ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ವೈಧ್ಯಕೀಯ ಮಾಹಾವಿದ್ಯಾಲಗಳಲ್ಲಿ ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ಹಾಗೂ ಔಷದೋಪಚಾರಗಳು ಲಭ್ಯವಿದೆ. ಭೇಟಿ ನೀಡಿ ತಮ್ಮ ಸಮಸ್ಯಗಳಿಗೆ ಪರಿಹಾರವನ್ನು ಕಂಡುಕೊಂಡು, ಉತ್ತಮ ಆರೋಗ್ಯವನ್ನು ತಮ್ಮದಾಗಿಸಿಕೊಳ್ಳಬಹುದು.

 

×
ABOUT DULT ORGANISATIONAL STRUCTURE PROJECTS