ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್) -ಧಾರವಾಡ

ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ

ರೈತ ಚೇತನ

Home

ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಲು ಹಾಗೂ ರೈತರಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸಲು ರೈತ ಚೇತನಯನ್ನುವ ಒಂದು ನೂತನ ಯೋಜನೆಯನ್ನು ಕರ್ನಾಟಕ ರಾಜ್ಯದಲ್ಲಿ ಪ್ರ-ಪ್ರಥಮ ಭಾರಿ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ(ಡಿಮ್ಹಾನ್ಸ್) ಧಾರವಾಡ ಹಾಗೂ ಕೃಷಿ ವಿಶ್ವವಿದ್ಯಾಲಯ ಧಾರವಾಡ ಸಹಯೋಗದೊಂದಿಗೆ ದಿನಾಂಕ:23/07/2015ರಂದು ಧಾರವಾಡ ಜಿಲ್ಲೆಯಲ್ಲಿ ಪ್ರಾರಂಭಿಸಲಾಯಿತು.ಕರ್ನಾಟಕ ರಾಜ್ಯದಲ್ಲಿ ಪ್ರ-ಪ್ರಥಮ ಭಾರಿಗೆ ರೈತರ ಆತ್ಮಹತ್ಯೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಪ್ರಾರಂಭಿಸಿರುವ ಈ  ಯೋಜನೆಯಲ್ಲಿಆಪ್ತಸಮಾಲೋಚನೆ,ಉಚಿತಸಹಾಯವಾಣಿ ವಿವಿಧ ಬೆಳೆಗಳ ಬಗ್ಗೆ ಮಾಹಿತಿಯನ್ನು ನೀಡುವುದು, ಸರ್ಕಾರದ ವಿವಿಧ ಇಲಾಖೆಗಳ ಸಹಕಾರದೊಂದಿಗೆ ರೈತರ ಸಮಸ್ಯೆಗಳಿಗೆ ಸ್ಪಂದಿಸುವುದು, ರೈತರ ಮಾನಸಿಕ ತೊಂದರೆಗಳಿದ್ದಲ್ಲಿ ಪರಿಣಾಮಕಾರಿ ಚಿಕಿತ್ಸೆ ಮತ್ತು ಔಷಧೋಪಚಾರ ನೀಡುವುದು ಖಿನ್ನತೆ ಮತ್ತು ಆತ್ಮಹತ್ಯೆ ಸಮಸ್ಯೆಗಳಿಗೆ ಆಪ್ತಸಮಾಲೋಚನೆ ಒದಗಿಸುವುದು ಮಧ್ಯವ್ಯಸನಚಟಗಳಿಗೆ ಸೂಕ್ತ ಚಿಕಿತ್ಸೆ ನೀಡುವುದು ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುವುದು ಪ್ರಮೂಕ ಉದ್ದಶಗಳಾಗಿವೆ. ಈ ವಿನೂತನ ಯೋಜನೆಗೆ ಧಾರವಾಡ ಕೃಷಿವಿಶ್ವವಿದ್ಯಾಲಯ ಧಾರವಾಡದ ಆವರಣದಲ್ಲಿಒಂದು ಪ್ರತ್ಯೇಕ ಘಟಕವನ್ನು ಅನ್ನದಾತರಿಗೊಸ್ಕರ ತೆರೆಯಲಾಗಿದೆ.ರೈತರು ಆತ್ಮಹತ್ಯೆ ಯೋಜನೆಗಳು ಬಂದಾಗ ಅಥವಾ ಖಿನ್ನತೆ, ಒತ್ತಡಕ್ಕೆ ಒಳಗಾದರೆ ಈ ಕೆಳಗಿನ ಉಚಿತ ಸಹಾಯವಾಣಿ 0836-2447055 Number ಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು.

×
ABOUT DULT ORGANISATIONAL STRUCTURE PROJECTS