ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್) -ಧಾರವಾಡ

ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ

COVID-19 ನಿಂದ ಬಳಲುತ್ತಿರುವ ಮಕ್ಕಳ ಕುಟುಂಬಗಳಿಗೆ ಸಹಾಯ ಮಾಡುವುದು

Home

Helping families of children suffering from COVID-19

ಆಕ್ಸಲರೇಟ್ ಇಂಡಿಯಾ ಫೌಂಡೇಶನ ಟ್ರಸ್ಟ್, ಬೆಂಗಳೂರು, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಹಾಗೂ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ, ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಕೋವಿಡ ಸಮಯದಲ್ಲಿ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಸಹಾಯ ನೀಡುವ ಉದ್ದೇಶದಿಂದ ಸ್ಪಂದನ ಕಾರ್ಯಕ್ರಮವನ್ನು ದಿನಾಂಕ 25.06.2022 ರಂದು ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿಮ್ಹಾನ್ಸ್ ನಿರ್ದೇಶಕರಾದ ಡಾ ಮಹೇಶ ದೇಸಾಯಿ ಮಾತನಾಡಿ, ಕೋವಿಡ ಸಮಯದಲ್ಲಿ ಸರಕಾರೆತರ ಸಂಘ ಸಂಸ್ಥೆಗಳು ಕಾರ್ಯ ನಿರ್ವಹಿಸಿದ ರೀತಿ ಮೆಚ್ಚುವಂತಹದು. ಒಬ್ಬ ವ್ಯಕ್ತಿಯ ಕೋವಿಡ್ ಸಾವಿನಿಂದ ಆ ಕುಟುಂಬದ 9 ಜನರ ಮೇಲೆ ಮಾನಸಿಕವಾಗಿ ಪ್ರಭಾವ ಬೀರುತ್ತದೆ ಎಂಬುದು ಸಂಶೋಧನೆಯಿಂದ ತಿಳಿಯಲ್ಪಟ್ಟಿದೆ, ಇಂತಹ ಪಾಲಕರು ಮತ್ತು ಮಕ್ಕಳಿಗೆ ಆಪ್ತ ಸಮಾಲೋಚನೆಯ ಅವಶ್ಯಕತೆ ಇದೆ. ಈ ಆಪ್ತ ಸಮಾಲೋಚನೆ ಹಾಗೂ ಮಾನಸಿಕ ವೈದ್ಯರ ಸಲಹೆಯಿಂದ ಕುಟುಂಬದವರಿಗೆ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ತುಂಬಲು ಸಾಧ್ಯ ಆದ್ದರಿಂದ ಇಂತಹ ಸೌಲಭ್ಯಗಳು ನಮ್ಮ ಸಂಸ್ಥೆಯಲ್ಲಿ ಸಿಗುತ್ತವೆ ಅದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಹೇಳುತ್ತ ಉಚಿತ ಸಹಾಯವಾಣಿಗೆ ಕರೆ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳ ಬಹುದೆಂದು ಹೇಳಿದರು, ಉಚಿತ ಸಹಾಯವಾಣಿ ನಂಬರ 9113258734.

ಧಾರವಾಡ ಮಾನಸಿಕ ಆರೋಗ್ಯ & ನರವಿಜ್ಞಾನ ಸಂಸ್ಥೆಯು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಸಮುದಾಯ ಮಟ್ಟದಲ್ಲಿ ನಡೆಯುವಂತಹ ಆರೋಗ್ಯ ಕಾರ್ಯಕ್ರಮಗಳಿಗೆ ಸದಾ ಸಹಕರಿಸುತ್ತಿದೆ ಹಾಗೂ ಮುಂದಿನ ದಿನಗಳಲ್ಲಿಯೂ ಸಹಕರಿಸುವ ಕುರಿತು ಹೇಳಿದರು. ಈ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ  ಡಾ. ಕಮಲಾ ಬೈಲುರು ಮಾತನಾಡುತ್ತ ಇಂತಹ ಕುಟುಂಬಕ್ಕೆ ಸರಕಾರದಿಂದ  ಪರಿಹಾರವನ್ನು ಒದಗಿಸಲಾಗುತ್ತದೆ. ಇಂತಹ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಸರಕಾರವು ವಿದ್ಯಾಭ್ಯಾಸ ಮುಂದುವರೆಸಲು ಹಲವು ಪ್ರೋತ್ಸಾಹಕರ ಯೋಜನೆಗಳನ್ನು ತಂದಿರುವ ಬಗ್ಗೆ ಹೇಳಿದರು. ಆಕ್ಸಲರೇಟ್ ಇಂಡಿಯಾ ಫೌಂಡೇಶನ ಟ್ರಸ್ಟ್, ಬೆಂಗಳೂರಿನ ಕಾರ್ಯದರ್ಶಿಗಳಾದ ಶ್ರೀ ವಿಠ್ಠಲದಾಸ ಕಾಮತ ಈ ಯೋಜನೆಯು ಕರ್ನಾಟಕದ 5 ಜಿಲ್ಲೆಗಳಲ್ಲಿ 1000 ಕ್ಕೂ ಹೆಚ್ಚಿನ ಕುಟುಂಬಗಳಿಗೆ ಸಹಾಯ ಮಾಡಿರುವ ಕುರಿತು ಹೇಳಿದರು. ಈ ಕಾರ್ಯಕ್ರಮದಲ್ಲಿ 130 ಕ್ಕೂ ಹೆಚ್ಚು ಮಕ್ಕಳಿಗೆ  1362 ರೂಪಾಯಿಯ ಕಲಿಕಾ ಸಾಮಗ್ರಿ ಮತ್ತು ಆಹಾರ ಸಾಮಗ್ರಿಗಳ ಕಿಟನ್ನು ಉಚಿತವಾಗಿ ನೀಡಲಾಯಿತು.

ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ  ಡಾ.ಮೋಹನಕುಮಾರ ಥಂಬದ ಮಾತನಾಡುತ್ತ ಇಂತಹ ಕುಟುಂಬಗಳಿಗೆ ಸ್ವಾವಲಂಬನೆಯ ಬದುಕಿಗೆ ಜೀವನೋಪಾಯದ ತರಬೇತಿಗಳನ್ನು ಆಯೋಜಿಸುವ ಕುರಿತು ಹೇಳುತ್ತ ಮುಂದಿನ ದಿನಗಳಲ್ಲಿ ತರಬೇತಿಗೆ ಹಾಜರಾಗಲು ಕರೆ ನೀಡಿದರು. ಅದರಂತೆ ಎಸ್.ವ್ಹಿ. ವಾಯ್. ಎಮ್. ಸಂಸ್ಥೆಯು ಸರಕಾರ ಮತ್ತು ಸರಕಾರೇತರ ಸಂಘಗಳೊಂದಿಗೆ ಸೇರಿಕೊಂಡು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ ಎಂದು ಹೇಳಿದರು. 

ಈ ಕಾರ್ಯಕ್ರಮದಲ್ಲಿ ಶ್ರೀಕಾಂತ ಹಂಜಿ ಸ್ವಾಗತ ಕೋರಿದರು, ಶೀಲಾ ಪೋಲಿಸ ಪಾಟೀಲ ಕಾರ್ಯಕ್ರಮ ನಿರೂಪಣೆ ಮಾಡಿದರು, ಸುಹಾನಿ ಚವ್ಹಾಣ ವಂದಿಸಿದರು.ಕಾರ್ಯಕ್ರಮದಲ್ಲಿ ಅಶೋಕ ಕೋರಿ, ಡಾ ಪೂಜಾ, ಡಾ ಸತೀಶ ಕೌಜಲಗಿ, ಆರ್.ಎಮ್. ತಿಮ್ಮಾಪುರ, ಸಂತೋಷಕುಮಾರ, ಮೌಲ್ಯ, ಸಂಪತ್ತು ಕುಮಾರ, ಪರ್ವತಗೌಡ, ವಿನಾಯಕ, ಯಲ್ಲಪ್ಪ, ಕುಮಾರಸ್ವಾಮಿ, ಹೇಮಾ ಮತ್ತು 230 ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.

×
ABOUT DULT ORGANISATIONAL STRUCTURE PROJECTS