De-addiction Free Positive Mental Health Lecture held at KPES Arts and Commerce Pre-Graduate College Dharwad

ಉಪನ್ಯಾಸ

ವಿದ್ಯಾರ್ಥಿಗಳು ಸಕಾರತ್ಮಕ ಚಿಂತನೆಗಳನ್ನು ಅಳವಡಿಸಿಕೊಂಡು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು, ಪ್ರಸ್ತುತ ಸ್ಪರ್ಧಾತ್ಮಕ ಪ್ರಪಂಚದ ಒತ್ತಡವನ್ನು ಸಮರ್ಥವಾಗಿ ಎದುರಿಸಲಾಗದೆ ಹಾಗೂ ಸರಿಯಾದ ಅಧ್ಯಯನ ಮಾಡದೆ ಖಿನ್ನತೆಗೆ ಓಳಗಾಗುವ ಅಪಾಯಕಾರಿ ಬೆಳವಣಿಗೆ ವಿದ್ಯಾರ್ಥಿಗಳಲ್ಲಿ ಕಂಡು ಬರುತ್ತಿದೆ.ವಿದ್ಯಾರ್ಥಿ ಬದುಕು ಯಶಸ್ವಿಗೊಳಿಸಲು ಸಕಾರಾತ್ಮಕ ಚಿಂತನೆ ಅಳವಡಿಸಿಕೊಂಡು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಡಿಮ್ಯಾನ್ಸ್ ನ ನಿರ್ದೇಶಕ ಡಾ.ಮಹೇಶ ದೇಸಾಯಿ ತಿಳಿಸಿದರು.ಸ್ಥಳಿಯ ಕೆ.ಪಿ.ಇ.ಎಸ್. ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯಲ್ಲಿ ಡಿಮ್ಹಾನ್ಸ್ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್ ಸಂಸ್ಥೆಯ ಸಹಯೋಗದಲ್ಲಿ ದಿನಾಂಕ 08.07.2022 ರಂದು ಹಮ್ಮಿಕೊಂಡ "ವ್ಯಸನ ಮುಕ್ತ ಸಕಾರಾತ್ಮಕ ಮಾನಸಿಕ ಆರೋಗ್ಯ"  ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಉಪನ್ಯಾಸ ನೀಡಿ, ಖಿನ್ನತೆ, ಹಿಂಜರಿತ, ಆತಂಕ, ಪರೀಕ್ಷೆ ಭಯದಿಂದ ಹೊರ ಬರಲು ದುಶ್ಟಟಗಳಿಗೆ ಮೊರೆ ಹೊಗಬಾರದು. 

ಮಾನಸಿಕ ಕಾಯಿಲೆಗಳಿಗೆ  ಆರಂಭಿಕ ಹಂತದಲ್ಲಿ ಆಪ್ತಸಮಾಲೋಚನೆ  ಮತ್ತು ಚಿಕಿತ್ಸೆ ದೊರಕಿದಲ್ಲಿ ದುಶ್ಚಟಗಳಿಂದ ದೂರವಾಗಿರಲು ಸಾಧ್ಯ ಎಂದರು.ಧೂಮಪಾನ, ತಂಬಾಕು, ಗಾಂಜಾ, ಗುಟುಕಾ, ಮಧ್ಯಪಾನ, ಹೊಗೆಸೊಪ್ಪು ಅತಿಯಾದ ಸೇವನೆ ಹಾಗೂ ಇತರ ಮಾದಕ ಪದಾರ್ಥಗಳ ಸೇವನೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಮೇಲೆ ಮತ್ತು  ಆರೋಗ್ಯದ ಮೇಲೆ ಅತಿಯಾದ ಪರಿಣಾಮ ಬೀರುತ್ತದೆ. ಹಲವು ಸಂದರ್ಭದಲ್ಲಿ ಚೆನ್ನಾಗಿ ಓದುವ ವಿದ್ಯಾರ್ಥಿ ಹಠಾತ್ತಾಗಿ ಓದಿನಲ್ಲಿ ಹಿಂದುಳಿದರೆ ಅದು ಕೂಡ ಮಾನಸಿಕ ಆರೋಗ್ಯ ಸಮಸ್ಯೆಯ ಸಂಕೇತವೇ ಎಂದರು. 

 ಖಿನ್ನತೆ ಕಾಯಿಲೆಯಿಂದ ವಿದ್ಯಾರ್ಥಿಗಳು ಮತ್ತು ಇತರೆ ವಯೋಮಾನದವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.  ಇಂತಹ ಪ್ರಕರಣಗಳಲ್ಲಿ ಚಿಕಿತ್ಸೆಯ ಜೊತೆಗೆ ಆಪ್ತಸಮಾಲೋಚನೆ ಪಡೆಯುವದು ಕೂಡ ಅತ್ಯಂತ ಪರಿಣಾಮಕಾರಿ. ಕೋವಿಡ್ ಕಾಲಘಟ್ಟದಲ್ಲಿ ಅನೇಕ ಜನರು ಆತಂಕ, ಖಿನ್ನತೆ ಮತ್ತು ಭಯದ ಲಕ್ಷಣಗಳಿಂದಾಗಿ ಆಸ್ಪತ್ರೆಗೆ ಹೋಗದೇ  ಇದ್ದ ಸಂದರ್ಭದಲ್ಲಿ ಡಿಮ್ಹಾನ್ಸ್ ನಡೆಸಿದ ಟೆಲಿ ಕೌನ್ಸ್‌ಲಿಂಗ್ ಸಹಾಯವಾಣಿ ಸಹಾಯ ಪಡೆದು ಉತ್ತಮ ಜೀವನ ಸಾಗಿಸಿದ್ದಾರೆ.

ಈಚಿನ ದಿನಗಳಲ್ಲಿ ಮೊಬೈಲ್, ಅಂತರ್ಜಾಲ ಹಾಗೂ  ಸೋಷಿಯಲ್ ಮಿಡಿಯಾದ ಅತೀಯಾದ ಬಳಕೆ ವ್ಯಸನವಾಗಿ ಕಾಡುತ್ತಿದೆ, ವಿದ್ಯಾರ್ಥಿಗಳು ಇಂಹದ ವ್ಯಸನಗಳಿಂದ ದೂರವಿರಬೇಕು ಎಂದರು. ಧಾರವಾಡದ ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಡಾ. ಮೋಹನಕುಮಾರ ಥಂಬದ ಮಾತನಾಡಿ , ಸಮುದಾಯ ಆದಾರಿತ ಹಲವು ಕಾರ್ಯಕ್ರಮಗಳನ್ನು ನಮ್ಮ  ಸಂಸ್ಥೆ ನಿರಂತರವಾಗಿ  ಹೆಬ್ಬಳ್ಳಿ, ಕಕ್ಕೇರಿ ಹಾಗೂ  ಹಳಿಯಾಳ ಪಟ್ಟಣದಲ್ಲಿ ಯಶಸ್ವಿಯಾಗಿ ನಡೆಸುತ್ತಾ ಮುನ್ನಡೆಯುತ್ತಿದೆ. ವಿದ್ಯಾರ್ಥಿಗಳು, ಸಾರ್ವಜನಿಕರು ಈ ಶಿಬಿರದ ಲಾಭ ಪಡೆದು  ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ವಿದ್ಯಾರ್ಥಿಗಳಲ್ಲಿನ ತೊಂದರೆಗಳಿಗೆ ಡಿಮ್ಹಾನ್ಸ್ ಸಂಸ್ಥೆಯ ಸಹಾಯವಾಣಿ  ನಂಬರ್-  9113258734   ಸಂಪರ್ಕಿಸಿ ಎಂದರು.

ಅಧ್ಯಕ್ಷತೆ ವಹಿಸಿದ್ದ  ಪ್ರಾಚಾರ್ಯ ಶ್ರೀ.ಎ.ಎಂ..ಶಲವಾಡಿ ಮಾತನಾಡಿ, ಉಪನ್ಯಾಸದಲ್ಲಿ ದೊರೆತ ಸಲಹೆಗಳನ್ನು ವಿದ್ಯಾರ್ಥಿಗಳು ತಮ್ಮ ಬದುಕಲ್ಲಿ ಅಳವಡಿಸಿಕೊಂಡು ದುಶ್ಟಟಗಳಿಂದ ದೂರವಾಗಿ ಒಳ್ಳೆಯ ನಾಗರಿಕರಾಗಿ ಸದೃಡ ಸಮಾಜ ಕಟ್ಟಿ ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ವರ್ಗ ಮತ್ತು 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದರು.

Last Updated: 11-07-2022 09:57 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : DHARWAD INSTITUTE OF MENTAL HEALTH AND NEUROSCIENCES-DHARWAD
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080