ಯೋಗ’ ಜಗತ್ತಿಗೆ ಭಾರತದ ಕೊಡುಗೆ

Yoga Day

ಕಳೆದ ಎಂಟು ವರ್ಷಗಳಿಂದ ಅಂತರಾಷ್ಟೀಯ ಯೋಗ ದಿನವನ್ನು ಜಗತ್ತಿನಾದ್ಯಂತ ಜೂನ್ 21 ರಂದು ಆಚರಿಸಲಾಗುತ್ತಿದ್ದು, ಯೋಗ ಜಗತ್ತಿಗೆ ಭಾರತ ನೀಡಿದ ಕೊಡುಗೆ ಎಂದು ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ. ಮಹೇಶ ದೇಸಾಯಿ ಹೇಳಿದರು. ಧಾರವಾಡದ ಡಿಮ್ಹಾನ್ಸ ಕ್ವಾಟ್ರಸ್ ಆವರಣದ ಮೈದಾನದಲ್ಲಿ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಜಂಟಿಯಾಗಿ ದಿನಾಂಕ 21.06.2022 ರಂದು ಏರ್ಪಡಿಸಿದ್ದ ವಿಶ್ವಯೋಗ ದಿನವನ್ನು ಮಹರ್ಷಿ ಪತಂಜಲಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿ ಭಾರತದ ಯುವ ಜನಾಂಗ ಸಧೃಢವಾಗ ಬೇಕಾದರೆ ಯೋಗ ಅತೀ ಅವಶ್ಯವಾಗಿದೆ. ದೇಶದ ಪ್ರಧಾನಿ ನರೇಂದ್ರ ಮೋದಿಯವರು 2014 ರಲ್ಲಿ ಅಂತರಾಷ್ಟೀಯ ಯೋಗ ದಿನ ಆಚರಿಸುವ ನಿರ್ಧಾರ ಮಾಡಿರುವುದಕ್ಕೆ ವಿಶ್ವದ ಮಾನ್ಯತೆ ದೊರೆತಿರುವುದು ಭಾರತದ ಶಕ್ತಿಯನ್ನು ವಿಶ್ವಕ್ಕೆ ತೋರಿಸಿಕೊಟ್ಟಂತೆ ಆಗಿದೆ ಎಂದರು. ಯೋಗ ಒಂದು ದಿನದ ಪ್ರದರ್ಶನವಾಗದೇ ನಿತ್ಯಜೀವನದ ಭಾಗವಾಗಬೇಕು ಎಂದು ಕರೆ ನೀಡಿದರು. ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯಲ್ಲಿ ಒಳ ರೋಗಿಗಳಿಗೆ ಯೋಗ ಶಿಕ್ಷಕರಿಂದ ತರಗತಿಗಳನ್ನು ಆಯೋಜಿಸಿದ್ದು ಇದರಿಂದ ಮಾನಸಿಕ ರೋಗಿಗಳಿಗೂ ಪರಿಹಾರ ದೊರೆಯುತ್ತಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟನ ಹಿರಿಯ ವ್ಯವಸ್ಥಾಪಕ ಡಾ. ಮೋಹನ ಥಂಬದ ಮಾತನಾಡಿ ಭಾರತ ಪ್ರಾಚೀನ ಕಾಲದಿಂದಲೂ ಯೋಗಕ್ಕೆ ಅತೀ ಮಹತ್ವದ ಸ್ಥಾನ ಪಡೆದಿತ್ತು ಮಾತ್ರವಲ್ಲದೇ ಜಗತ್ತಿಗೇ ಭಾರತ ಯೋಗ ಗುರುವಾಗಿತ್ತು. ಯೋಗದ ಮಹತ್ವವನ್ನು ಅರಿತುಕೊಂಡು ನಾವು ಜಾಗೃತಿ ಮೂಡಿಸುವ ಮೂಲಕ ಯೋಗ ಒಂದು ಆಂದೋಲನವಾಗಬೇಕೆಂದು ಕರೆಕೊಟ್ಟರು. ಯೋಗ ಜನಸಾಮನ್ಯರ ಜೀವನದ ಕ್ರಮವಾಗಬೇಕು, ಅಲ್ಲದೇ ಯೋಗ ನಮ್ಮ ಆರೋಗ್ಯ ವ್ಯವಸ್ಥೆಗೆ ಪರ್ಯಾವಾಗದೇ ಆರೋಗ್ಯಕ್ಕೆ ಪೂರಕ ವ್ಯವಸ್ಥೆಯಾಗಿದೆ ಎಂದರು.

ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ ಡಾ.ರಾಘವೇಂದ್ರ ನಾಯಕ್, ಡಾ. ತೆಜಸ್ವೀ, ಡಾ.ಆದಿತ್ಯ ಪಾಂಡುರಂಗಿ, ಡಾ.ಆರ್.ಶ್ರಿವಾಣಿ, ಡಾ.ಗಾಯಿತ್ರಿ ಹೆಗಡೆ, ಡಾ.ಸುನಂದಾ, ಡಾ.ಸತೀಶ್ ಕೌಜಲಗಿ, ನರ್ಸಿಂಗ್ ಸೂಪರಿಟೆಂಡೆಂಟ್ ಶ್ರೀಮತಿ ಶಾಂತ ಮೇರಿ, ಸ್ವಾಮಿ ವಿವೇಕನಂದ ಯೂತ್ ಮೂವ್ ಮೆಂಟನ ಜಯಂತ ಕೆ.ಎಸ್, ಜಯಕುಮಾರ, ಸಂತೋಷ ಶೀಸನಳ್ಳಿ, ಮೌಲ್ಯಾ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ ಸಿಬ್ಬಂದಿ ಅಶೋಕ ಕೋರಿ ಕಾರ್ಯಕ್ರಮ ನಿರೂಪಿಸಿದರು. ಆರ್.ಎಂ ತಿಮ್ಮಾಪುರ ವಂದಿಸಿದರು. ಯೋಗ ಶಿಕ್ಷಕರಾದ ಗೋಪಲ ಅಠಾವಳೆ ಹಾಗೂ ಕುಮಾರಿ ವಾಣಿ ತುಪ್ಪದ ಒಂದು ಗಂಟೆಗಳ ಕಾಲ ಯೋಗಾಭ್ಯಾಸ ಮಾಡಿಸಿದರು. ಸ್ವಾಮಿ ವಿವೇಕಾನಂದಯೂತ್ ಮೂವ್ ಮೆಂಟ್ ಹಾಗೂ ಡಿಮ್ಹಾನ್ಸ್ ಸಿಬ್ಬಂದಿ ಸೇರಿದಂತೆ 300 ಕ್ಕೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇತ್ತೀಚಿನ ನವೀಕರಣ​ : 22-06-2022 09:43 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ-ಧಾರವಾಡ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080