World no Tobaco Day

ತಂಬಾಕು ಸೇವನೆ ಒಂದು ಸಾಮಾಜಿಕ ಹಾಗೂ ಸಾರ್ವಜನಿಕ ಸಮಸ್ಯೆಯಾಗಿದೆ. ತಂಬಾಕು ಸೇವನೆಯನ್ನು ನಿಯಂತ್ರಿಸಲು ಪ್ರತಿ ವರ್ಷ ಮೇ ೩೧ ರಂದು ವಿಶ್ವತಂಬಾಕು ನಿಷೇದ ದಿನವನ್ನು ಆಚರಿಸಲಾಗುತ್ತದೆ. ವಿಶ್ವಆರೋಗ್ಯ ಸಂಸ್ಥೆಯ ಪ್ರತಿ ವರ್ಷ ಹೊಸ ಹೊಸ ಘೋಷಣೆಗಳನ್ನು ಸಾರ್ವಜನಿಕರಿಗೆಲ್ಲ ಉಪಯುಕ್ತವಾಗುವಂತೆ ಮತ್ತು ಅನ್ವಯವಾಗುವಂತೆ ಹೊರಡಿಸುತ್ತಲೇ ಬಂದಿದೆ. ಅಂತೆಯೇ ಈ ವರ್ಷದ ಘೋಷಣೆ ಪರಿಸರವನ್ನು ಸಂವರಕ್ಷಿಸುವುದು. ತಂಬಾಕಿನ ಬಳಕೆಯಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಕುರಿತು ಜಾಗೃತಿಯನ್ನು ಮೂಡಿಸುವುದು ಈ ದಿನದ ಉದ್ದೇಶವಾಗಿದೆ. ಸಂಶೋಧನೆಯ ಪ್ರಕಾರ ೮ಮಿಲಿಯನ್ ರಷ್ಟು ಜನ ತಂಬಾಕು ಮತ್ತು ತಂಬಾಕಿನ ಪರ್ಯಾಯ ಸೇವನೆಯಿಂದ ಸಾಯುತ್ತಿದ್ದಾರೆ. ತಂಬಾಕು ಸೇವನೆಯಿಂದ ಶ್ವಾಸಕೋಶದ ತೊಂದರೆ, ಕ್ಷಯರೋಗ, ಅಸ್ತಮಾ, ಕೆಮ್ಮು, ಕ್ಯಾನ್ಸರ್ ಮುಂತಾದ ಕಾಯಿಲೆಗಳು ನಮ್ಮನ್ನು ಆವರಿಸುತ್ತವೆ. ಇದರಿಂದ ನಮ್ಮ ಆರೋಗ್ಯ ಕ್ಷೀಣಿಸಿ, ಸಾವು ಸನ್ನಿಹಿತವಾಗುತ್ತದೆ. ತಂಬಾಕಿನ ಬಳಕೆಯಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಕುರಿತು ಜಾಗೃತಿಯನ್ನು ಮೂಡಿಸುವುದು ಈ ದಿನದ ಉದ್ದೇಶವಾಗಿದೆ. ವಿಶ್ವತಂಬಾಕು ದಿನ ಆಚರಿಸುವುದರಲ್ಲಿ ಬಹಳ ಮಹತ್ವವಿದೆ ಅನಿಸಿತು.

ತಂಬಾಕು ಕೆಲವರಿಗೆ ಅತ್ಯಂತ ಪ್ರೀಯವಾದದ್ದು, ಇನ್ನೂ ಕೆಲವರಿಗೆ ವಾಕರಿಕೆ. ತಂಬಾಕು ಹಾಗೂ ಅದರ ಪಯಾಯ ಉತ್ಪನ್ನಗಳಾದ ಬೀಡಿ, ಸಿಗರೇಟ್, ಗಾಂಜಾ ಇವುಗಳು ವ್ಯಕ್ತಿಯನ್ನು ಆಕ್ರಮಿಸಿ ಬಿಡುತ್ತಿವೆ. ಒಮ್ಮೆ ಅದರ ದಾಸನಾದರೆ ಅದರಿಂದ ಹೊರಬರಲಾರದೇ ಆ ವ್ಯಕ್ತಿ ನರಳಾಡುತ್ತಾನೆ. ಕ್ಷಣಿಕ ಮಾಡಿದ ಚಟ ಆತನ ಜೀವನದ ಚಿತ್ರಣವೇ ಬದಲಾಗುತ್ತದೆ. ಸ್ವಲ್ಪ ತಿಂದರಾಯ್ತು, ಸ್ವಲ್ಪ ಸೇದಿದರಾಯ್ತು ಎಂದು  ದಿನನಿತ್ಯದ ಅಭ್ಯಾಸವಾಗಿ ಬಿಡುತ್ತದೆ. ಎಷ್ಟೋ ಜನರು ಊಟ ಮಾಡಿದಕೂಡಲೇ, ಚಹಾ ಕುಡಿದಾದ ನಂತರ ಸ್ನೇಹಿತರಜೊತೆ ಸೇರಿದಾಗ, ಟೈಂ ಪಾಸ್ ಮಾಡಲು  ಹಾಕಿಕೊಂಡAಥ ಗುಟಕಾ, ತಂಬಾಕು ಅವರನ್ನು ಮತ್ತೆ ಮತ್ತೆ ತಿನ್ನುವಂತೆ ಮಾಡುತ್ತದೆ. ತಂಬಾಕು ತಿನ್ನುವವರ ಬಾಯಿ ಮೆಲುಕ ಹಾಕುತ್ತಲೇ ಇರುತ್ತದೆ.  ಇಲ್ಲಾಂದ್ರೆ ಮಾತನಾಡಲು ಬರದೇ ಇರುವಷ್ಟು ಉಗುಳು ಅವರ ಬಾಯಿ ಅವರಿಸಿ ಬಿಟ್ಟಿರುತ್ತದೆ. ಅದರಲ್ಲೇ ಅವರು ಮಾತನಾಡಿದಾಗ ಎದುರಿದ್ದವರಿಗೆ ಅಸಹ್ಯ, ಮೈಮೇಲೆ ಉಗುಳು ಸಿಡಿಯುತ್ತಿರುತ್ತದೆ. ಆ ವಾಸನೆ ತಲೆ ಸಿಡಿಯುತ್ತದೆ. ಕಚೇರಿಯ ಮೂಲೆ ಮೂಲೆಗಳಲ್ಲಿ, ಬಸ್‌ಗಳ ಕಿಟಿಕಿಗಳಲ್ಲಿ, ಬಸ್ ನಿಲ್ದಾಣದಲ್ಲಿ,  ರೇಲ್ವೆ ನಿಲ್ದಾಣದ ಸಂದುಗೊAದುಗಳಲ್ಲಿ, ಸಿನಿಮಾ ಮಂದಿರದ ಹತ್ತಿರ ತಂಬಾಕು ಗುಟಕಾ, ಬೀಡಿ ವಾಸನೆ ಹೇಳತೀರದು. ಬೇರೆಯವರಿಗೆ ಇದರಿಂದ ತೊಂದರೆ ಆಗುತ್ತದೆಂದು ಅರಿಯುವುದೇ ಇಲ್ಲ. ತರಕಾರಿ ಮಾರುಕಟ್ಟೆಯಲ್ಲಿ ಅಲ್ಲೇ ಉಗುಳುತ್ತಾರೆ ಅಲ್ಲೇ ತರಕಾರಿ ಮಾರುತ್ತಾರೆ. ಹೀಗೆ ಹೇಳುತ್ತಾ, ಹೋದಲ್ಲಿ ಉದ್ದನೆಯ ಪಟ್ಟಿ ಬೆಳೆಯುತ್ತದೆ.

ಪರಿಸರವನ್ನು ರಕ್ಷಿಸಿ, ಸ್ವಚ್ಛತೆಯಿಂದ ಕಾಪಾಡಿ, ಎಲ್ಲೆಂದರಲ್ಲಿ ಉಗುಳಬೇಡಿ ಎಂದು ಹೇಳುತ್ತೇವೆ. ಕೆಲವು ಕಡೆಗಳಲ್ಲಿ ನಾಮ ಫಲಕಗಳನ್ನು ನೋಡುತ್ತೇವೆ. ಆದರೆ ಅದನ್ನು ಪಾಲಿಸುವವರು ಯಾರು? ಎಂದು ಪ್ರಶ್ನೆಯಾಗಿಯೇ ಉಳಿದಿದೆ.

ತಂಬಾಕು ಹಾಗೂ ತಂಬಾಕಿನ ಪರ್ಯಾಯ ಸೇವನೆ ಮಾಡುವುದರಿಂದ ಹಲವಾರು ರೀತಿಯ ದೈಹಿಕ ಹಾಗೂ ಮಾನಸಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಸ್ತಿçÃಯರಲ್ಲಾಗಲಿ, ಪುರುಷರಲ್ಲಾಗಲಿ ಹೃದಯದಕ್ಕೆ ಸಂಬAಧಪಟ್ಟ ಕಾಯಿಲೆಗಳು, ಶ್ವಾಸಕೋಶದ ತೊಂದರೆ, ಕೆಮ್ಮು-ದಮ್ಮು, ಕ್ಷಯರೋಗ, ಬಾಯಿಹುಣ್ಣು, ಕ್ಯಾನ್ಸರ್, ಖಿನ್ನತೆ, ಮಾನಸಿಕ ಒತ್ತಡ ಹೀಗೆ ಹಲವಾರು ರೀತಿಯ ಕಾಯಿಲೆಗಳಿಂದ ಬಳಲಬೇಕಾಗುತ್ತದೆ. ತಂಬಾಕು ಸೇವಿಸುವಂಥ ಮಹಿಳೆ ಗರ್ಭಿಣಿಯಾಗಿದ್ದಲ್ಲಿ, ಹುಟ್ಟುವ ಮಗುವಿನ ಬೆಳವಣಿಗೆಯ ಮೇಲೆ ಹಲವಾರು ರೀತಿಯ ಪರಿಣಾಮಗಳನ್ನು ಬೀರುತ್ತದೆ.

ಕೇವಲ ಪುರುಷರು ಮಾತ್ರವಲ್ಲದೇ ಯುವಕರು, ಬಾಲಕಾರ್ಮಿಕರು, ಮಹಿಳೆಯರೂ ಕೂಡ ಗುಟಕಾ, ತಂಬಾಕು, ಸಿಗರೇಟ, ಗಾಂಜಾ ಸೇವನೆ ಮಾಡುವುದನ್ನು ನೋಡಿದ್ದೇವೆ. ಸಾಯಂಕಾಲವಾಗುತ್ತಿದ್ದAತೆ  ಗುಂಪು ಗುಂಪಾಗಿ ಸ್ನೇಹಿತರ ಜೊತೆಗೆ ಸಿಗರೇಟ್ ಸೇದುವ ಯುವಕರು, ಹಾಳು ಹರಟೆ ಹೊಡೆಯುತ್ತಾ ನಿಂತಿರುತ್ತಾರೆ. ತಂಬಾಕಿನಲ್ಲಿರುವ ನಿಕೋಟಿನ್ ಅಂಶ ಅವರನ್ನು ಚಟಗಳಿಗೆ ಅವಲಂಭಿಸುವAತೆ ಮಾಡುತ್ತದೆ. ಒತ್ತಾಯ ಪೂರ್ವಕವಾಗಿ ಕೆಟ್ಟ ಅಭ್ಯಾಸಗಳನ್ನು ಕಲಿಸುತ್ತಾರೆ. ಸಾಯಂಕಾಲ ಕೆಲವೊಂದು ಹೋಟೆಲ್‌ಗಳಲ್ಲಿ ನೋಡಿದ್ರೆ ಎಷ್ಟೋ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಿಗರೇಟ್, ಹುಕ್ಕಾ ಬಳಸುತ್ತಾರೆ. ಹದಿಹರೆಯಕ್ಕೆ ಕಾಲಿಟ್ಟಾಗ ದೈಹಿಕ ಬದಲಾವಣೆಯ ಜೊತೆಗೆ ಮನಸ್ಸಿನ ಬದಲಾವಣೆಯು ಆಗುತ್ತದೆ. ಸ್ನೇಹಿತ ಸಹವಾಸವು ಕೂಡ ಚಟಗಳನ್ನು ಅವಲಂಭಿಸುವಲ್ಲಿ ಮುಖ್ಯ ಪಾತ್ರವಹಿಸುತ್ತದೆ. ನಮ್ಮ ಸುತ್ತಮುತ್ತಲಿನ ಪರಿಸರದ ಪ್ರಭಾವವು ಅಷ್ಟೇ ಮುಖ್ಯ. ನಮ್ಮನ್ನು ನಾವು ನಿಯಂತ್ರಸಿಕೊಳ್ಳುವುದು ಅತೀ ಮುಖ್ಯವಾಗಿದೆ.

ಕೊರೊನಾ ಮತು ತಂಬಾಕು :

ಅಬ್ಬಾ! ಈ ಕೊರೊನಾ ಸೋಂಕು ಜಗತ್ತನ್ನೇ ನಲುಗಿಸಿಬಿಟ್ಟಿದೆ. ಎಷ್ಟೋ ಜನರ ಜೀವನವನ್ನು ಅತಂತ್ರ ಸ್ಥಿತಿಗೆ ತಂದೊದಗಿಸಿದೆ. ಎಷ್ಟೋ ಜನರು ಒಂದೊತ್ತಿನ ಊಟಕ್ಕೂ ಪರಿತಪಿಸಿದ್ದಾರೆ. ಈ ಸಮಯದಲ್ಲಿ ಲಾಕ್‌ಡೌನ್ ಕೂಡ ಮಾಡಲಾಯಿತು. ಎಲ್ಲ ಅಂಗಡಿ ಮುಗ್ಗಟ್ಟುಗಳು, ದೇವಸ್ಥಾನ, ಪಾರ್ಕ, ಮಾಲ್, ಕಛೇರಿ, ಶಾಲೆ-ಕಾಲೇಜುಗಳು, ಎಲ್ಲ ಸಾರಿಗೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಯಿತು. ನಿತ್ಯಜೀವನ ನಿರ್ವಹಣೆಗಾಗಿ ನಿಗದಿತ ಸಮಯದಲ್ಲಿ ಅವಶ್ಯಕ ಸಾಮಗ್ರಿಗಳನ್ನು ಪಡೆಯಲು ಅನುಕೂಲವನ್ನು ಮಾಡಿಕೊಡಲಾಯಿತು. ಮನೆಯ ಮುಂದೆ ತರಕಾರಿ ಖರೀದಿಸಲು ಅನುವು ಮಾಡಿಕೊಡಲಾಯಿತು. ಅಂಗಡಿ ಮುಗ್ಗಟ್ಟುಗಳಲ್ಲಿಯ ಸಾಮಗ್ರಿಗಳು ಖಾಲಿಯಾಗುತ್ತಿರುವಂತೆ ತಂಬಾಕು, ಗುಟಕಾ, ಸಿಗರೇಟು ಬೀಡಿಗಳು ಖಾಲಿಯಾದವು. ರಸ್ತೆಗಳ ಮೇಲೆ ವಾಹನಗಳು ಕಾಣಸಿಗದಂತೆ, ರಸ್ತೆಯ ಅಕ್ಕಪಕ್ಕದಲ್ಲಿ ಗುಟಕಾ, ಸಿಗರೇಟು, ತಂಬಾಕಿನ ಮಿಂಚು ಮಿಂಚಿನ ಪಾಕೀಟುಗಳು ಕಾಣಸಿಗುತ್ತಿರಲಿಲ್ಲ, ಹುಡುಕಬೇಕಾಯಿತು. ಪದೇ ಪದೇ ಉಗುಳಿ ಗಲೀಜಾಗಿದ್ದ ಸ್ಥಳಗಳು ಸೂರ್ಯನ ಶಾಖದಿಂದ ಶುದ್ಧವಾದವು. ಆದರೆ ತಂಬಾಕು, ಗುಟಕಾ, ಸಿಗರೇಟು ಬೀಡಿಗಳ ಚಟವನ್ನು ಹೊಂದಿದವರು ಮಾತ್ರ ಶಪಿಸತೊಡಗಿದರು. ಕಾರಣ ಎಲ್ಲಿಯೂ ದೊರೆಯದಾಯಿತು. ದೊರೆತರೂ ಅವುಗಳ ಬೆಲೆ ಗಗನಕ್ಕೇರಿ, ಖರೀದಿಸಲು ಮತ್ತೆ ಮತ್ತೆ ಎಷ್ಟು ಎಂದು ಕೇಳಬೇಕಾಯಿತು. ೫ರೂ ಅಥವಾ ೧೦ರೂಪಾಯಿಗಳ ಗುಟಕಾ ಪಾಕೀಟು ೫೦ರೂಪಾಯಿಗಳವರೆಗೂ ಮಾರಾಟವಾಗಿವೆ. ಆದರೂ ಹೇಗೋ ಮಾಡಿ ತಂದುಕೊAಡರೂ ನೋಡಿ ನೋಡಿ, ತೂಕಮಾಡಿ ಬಳಸತೊಡಗಿದರು. ಎಷ್ಟೋ ಜನರು ಬೆಲೆ ಜಾಸ್ತಿಯಾಯಿತೆಂದು ಚಟಗಳನ್ನು ಬಿಟ್ಟರು. ಇನ್ನು ಹಲವರು ಕೊರೊನಾವನ್ನು ಶಪಿಸತೊಡಗಿದರು. ಆದರೆ ತಂಬಾಕು, ಗುಟಕಾ, ಸಿಗರೇಟು ಬೀಡಿಗಳ ಪ್ರಿಯರಿಗೆ ಈ ಚಟಗಳು ತಮ್ಮ ಮತ್ತು ತಮ್ಮ ಸುತ್ತ ಮುತ್ತಲಿನವರ ಆರೋಗ್ಯ ಹಾಳು ಮಾಡಿತ್ತಿವೆ ಎಂಬುದು ತಿಳಿಯಲಿಲ್ಲ. ಅನೇಕರು ಅವುಗಳ ಬೆಲೆ ಜಾಸ್ತಿ ಆಗಿದ್ದರೂ ತಮ್ಮ ಚಟಗಳಿಗೇನೂ ಕೊರತೆ ಮಾಡಿಕೊಂಡಿಲ್ಲ. ಅದಕ್ಕಾಗಿಯೇ ಅವುಗಳನ್ನು ಅಗತ್ಯಕ್ಕಿಂತ ಹೆಚ್ಚಾಗಿ ಮನೆಯಲ್ಲಿ ಶೇಖರಣೆ ಮಾಡಿಟ್ಟುಕೊಂಡು, ಲಾಕ್‌ಡೌನ್‌ಎಂದು ಮನೆಯಲ್ಲಿ ಸಖತ್ ಮಜಾ ಮಾಡಿದ್ದಾರೆ. ಲಾಕ್‌ಡೌನ್‌ಇನ್ನೂ ಮುಂದುವರೆಯಬೇಕಾಗಿತ್ತು ಎನ್ನುವುದು ಎಷ್ಟೋ ಕುಟುಂಬಗಳ ಅಭಿಪ್ರಾಯ.

ತಂಬಾಕು ಸೇವನೆಯ ನಿಯಂತ್ರಣ:

ದೃಢ ಮನಸ್ಸನ್ನು ಹೊಂದಿರಿ.

ಚಟಗಳು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತವೆ ಮತ್ತು ಇತರ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತವೆಂದು ಅರಿಯಿರಿ.

ಶುಚಿ ರುಚಿಯಾದ ಊಟದಿಂದ ಉತ್ತಮ ಆರೋಗ್ಯ.

ವಾಕಿಂಗ್, ವ್ಯಾಯಾಮ, ಸಂಗೀತದಿAದÀ ಮನಸ್ಸಿನ ನೆಮ್ಮದಿ.

ಉತ್ತಮ ಯೋಚನೆ, ಉತ್ತಮರ ಸಹವಾಸದಿಂದ ಉತ್ತಮದ ಜೀವನ.

ಪ್ರತಿಯೊಂದು ಸಮಸ್ಯೆಯ ನಿಯಂತ್ರಣಕ್ಕೆ ಅಥವಾ ನಮ್ಮ ಯಾವುದೇ ರೀತಿಯ ಸಂತೋಷಕ್ಕೆ ಯಾವುದೇ ಚಟಗಳನ್ನು ಹೊಂದಲೇಬೇಕೆAಬ ನಿಯಮವೇನಿಲ್ಲ.

ಸ್ನೇಹಿತರು ಒಳ್ಳೆಯವರಾಗಿದ್ದರೂ, ಅವರು ಮಾಡುವಂಥ ಚಟಗಳು ದುಷ್ಪçಭಾವವನ್ನು ಬೀರುತ್ತದೆ.

ತಂಬಾಕು ಹಾಗೂ ತಂಬಾಕಿನ ಪರ್ಯಾಯ ಪದಾರ್ಥದ ಸೇವನೆಯನ್ನು ನಿಯಂತ್ರಿಸುವುದು ಪ್ರತಿಯೊಬ್ಬರ ಪ್ರಯತ್ನ ಅಷ್ಟೇ ಮುಖ್ಯ.

ತಂಬಾಕು ಸೇವನೆಯಿಂದ ನಮ್ಮ ಆರೋಗ್ಯವೇ ಹಾಳು ಎಂದು ಅರಿಯಬೇಕಾಗಿದೆ. ಸಮಸ್ಯೆಗಳಿಗೆ ಚಟಗಳೇ ಪರಿಹಾರವಲ್ಲ.

ತಂಬಾಕು ಮತ್ತು ಅದರ ಎಲ್ಲ ಅವಲಂಭಿತ ಚಟಗಳಿಂದ ದೂರವಾಗಬೇಕಾದರೆ ಸಂಬAಧಿಸಿದAಥ ಸೂಕ್ತ ವೈದ್ಯರು ಹಾಗೂ ಕೆಲವು ಮುಕ್ತ ಸಲಹೆ ಪಡೆಯುವುದರಿಂದ  ನಿಯಂತ್ರಿಸಬಹುದು.

ನನ್ನ ಆರೋಗ್ಯ, ನನ್ನ ಕುಟುಂಬ, ನನ್ನ ಸಮಾಜ, ದೇಶ ಸ್ವಚ್ಛ ಸ್ವಸ್ಥವಾಗಿರಬೇಕೆಂದು ಬಯಸಿದಾಗ ತಮ್ಮಷ್ಟಕ್ಕೆ ತಾನೇ ನಿಯಂತ್ರಿಸಬಹುದು.

ತಂಬಾಕು ಹಾಗೂ ತಂಬಾಕಿನ ಪರ್ಯಾಯ ಸೇವನೆ ಮಾಡುವವರು ಅರಿಯಬೇಕಾಗಿದೆ. ಅದು ನಮ್ಮೆಲ್ಲರಿಂದ ಶುರು ಆಗಬೇಕು.


ಶ್ರೀದೇವಿ ಬಿರಾದಾರ
ಡಿಮ್ಹಾನ್ಸ್, ಧಾರವಾಡ.

Last Updated: 31-05-2022 11:01 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : DHARWAD INSTITUTE OF MENTAL HEALTH AND NEUROSCIENCES-DHARWAD
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080